
ಸಂಜೆವಾಣಿ ವಾರ್ತೆ
ನಂಜನಗೂಡು.ಆ.01; ಕಾಂಗ್ರೆಸ್ ಮುಖಂಡ ಚೇತನ್ ರವರು ಧ್ರುವನಾರಾಯಣ್ ರವರ 65ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಬ ರ್ಶೀಟ್ ಮತ್ತು ಸ್ಪೆ ಟರ್ ಮತ್ತು ವಾಟರ್ ಬಾಟಲ್ ಗಳನ್ನು ವಿತರಣೆ ಮಾಡಿದರು
ವಿತರಣೆ ಮಾಡಿ ಮಾತನಾಡಿದ ಅವರು ನಾನು ಧ್ರುವನಾರಾಯಣ್ ರವರ ಕಟ್ಟ ಅಭಿಮಾನಿ ಅವರ ಜೊತೆ ಹೆಚ್ಚಿನ ಒಡನಾಟ ಇತ್ತು ಅದೇ ರೀತಿ ಶಾಸಕರಾದ ದರ್ಶನ್ ಧ್ರುವ ನಾರಾಯಣ್ ಅವರ ಜೊತೆನೂ ಇದ್ದೇನೆ ಧ್ರುವನಾರಾಯಣ್ ಮತ್ತು ದರ್ಶನ್ ರವರು ಆಶಾ ಕಾರ್ಯಕರ್ತರು ಪೌರಕಾರ್ಮಿಕರು ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು ಅದೇ ರೀತಿ ಶಿಕ್ಷಣಕ್ಕೂ ಹೆಚ್ಚು ಹೊತ್ತು ನೀಡಿರುತ್ತಿದ್ದಾರೆ ಆದ್ದರಿಂದ ಪ್ರತಿ ವರ್ಷವೂ ಕೂಡ ಪೌರಕಾರ್ಮಿಕರಿಗೆ ಆಶಾ ಕಾರ್ಯಕರ್ತರಿಗೆ ನನ್ನ ಕೈಲಾದಷ್ಟು ಧ್ರುವನಾರಾಯಣ್ ರವರ ಹುಟ್ಟುಹಬ್ಬದ ದಿನ ನೀಡುತ್ತಾ ಬಂದಿದ್ದೇನೆ ಮುಂದಿನ ಸಾರಿ ಇನ್ನೂ ಹೆಚ್ಚಿನ ರೀತಿ ಕಾರ್ಯಕ್ರಮಗಳನ್ನು ಮಾಡುತ್ತೇನೆ ಎಂದರು
ಈ ಸಂದರ್ಭದಲ್ಲಿ ದೇಬೂರು ಅಶೋಕ ನಗರ ಸಭೆ ಮಾಜಿ ಅಧ್ಯಕ್ಷ ಚೆಲುವರಾಜು ಸೇರಿದಂತೆ ಇತರರು ಇದ್ದರೆ.


































