Home ಜಿಲ್ಲೆ ಬೆಂಗಳೂರು ಬರ ನಿರ್ವಾಹಣೆಗೆ ಸಜ್ಜಾಗಲು ಜಿಲ್ಲಾಧಿಕಾರಿ ಸಿ.ಇ.ಓ,ಗಳಿಗೆ ಸಿಎಂ ಸೂಚನೆ

ಬರ ನಿರ್ವಾಹಣೆಗೆ ಸಜ್ಜಾಗಲು ಜಿಲ್ಲಾಧಿಕಾರಿ ಸಿ.ಇ.ಓ,ಗಳಿಗೆ ಸಿಎಂ ಸೂಚನೆ

ಕೋಲಾರ,ಜು,೨೦- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್‌ಫರನ್ಸ್ ಮೂಲಕ ಸಭ ನಡೆಸಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು


ರಾಜ್ಯದಲ್ಲಿ ಜುಲೈ ೧೮ರವರಗ ಮುಂಗಾರು ಮಳ ವಾಡಿಕೆಗಿಂತ ಒಟ್ಟಾರ ಶೇ.೩೯ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಅತ್ಯಧಿಕ -೪೩%, ಕರಾವಳಿಯಲ್ಲಿ -೩೫%, ಉತ್ತರ ಒಳನಾಡಿನಲ್ಲಿ -೩೩% ಮತ್ತು ದಕ್ಷಿಣ ಒಳನಾಡಿನಲ್ಲಿ -೩೧% ರಷ್ಟು ಮಳ ಕೊರತೆ ದಾಖಲಾಗಿದೆ. ೨೬ ಜಿಲ್ಲಗಳ ಒಟ್ಟು ೧೫೮ ತಾಲೂಕುಗಳಲ್ಲಿ ಕೊರತೆ ಹಾಗೂ ೨೦ ತಾಲೂಕುಗಳಲ್ಲಿ ತೀವ್ರ ಮಳ ಕೊರತೆ ಕಂಡು ಬಂದಿದೆ. ೫೧ ತಾಲೂಕುಗಳಲ್ಲಿ ಮಾತ್ರ ವಾಡಿಕೆ ಮಳಯಾಗಿದೆ. ವಿಜಯನಗರ ಜಿಲ್ಲ ತೀವ್ರ ಮಳ ಕೊರತೆ (-೬೭%) ದಾಖಲಿಸಿದೆ.


ರಾಜ್ಯದ ೧೬೯ ಹೋಬಳಿಗಳಲ್ಲಿ ವಾಡಿಕೆ ಮಳಯಾಗಿದ್ದು, ೫೦೯ ಹೋಬಳಿಗಳಲ್ಲಿ ಕೊರತೆ ಹಾಗೂ ೧೧೮ ಹೋಬಳಿಗಳಲ್ಲಿ ತೀವ್ರ ಕೊರತೆ ದಾಖಲಾಗಿದೆ.


ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳದ ವರ್ಷಕ್ಕ ಹೋಲಿಸಿದರ ಬಹಳ ಕಡಿಮೆಯಾಗಿದ್ದು, ಒಟ್ಟಾರಯಾಗಿ ಶೇ.೪೦ ರಷ್ಟು ಮಾತ್ರ ನೀರು ಸಂಗ್ರಹವಿದೆ. ಪ್ರಸ್ತುತ ಒಟ್ಟಾರ ಶೇ.೩೫೯.೯೮ ಟಿಎಂಸಿ ನೀರು ಸಂಗ್ರಹವಿದ್ದು, ಕಳದ ವರ್ಷ ಇದೇ ಅವಧಿಯಲ್ಲಿ ೬೮೧.೮೩ ಟಿಎಂಸಿ ನೀರು ಸಂಗ್ರಹವಿತ್ತು.


ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಒಟ್ಟು ಸಾಮರ್ಥ್‌ಯದ ಕೇವಲ ಸರಾಸರಿ ಶೇ.೨೩ ರಷ್ಟು ನೀರು ಸಂಗ್ರಹವಿದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಸರಾಸರಿ ಶೇ.೫೧ ಹಾಗೂ ಕೃಷ್ಣ? ಕಣಿವೆ ಜಲಾಶಯಗಳಲ್ಲಿ ಸರಾಸರಿ ಶೇ.೪೮ ರಷ್ಟು ನೀರು ಸಂಗ್ರಹವಿದೆ. ಜಲಾಶಯಗಳಲ್ಲಿನ ಒಟ್ಟಾರ ಒಳ ಹರಿವು ೫೨,೧೦೮ ಕ್ಯೂಸೆಕ್ ಇದೆ.


ಪ್ರಸ್ತುತ ೧೨೨ ತಾಲೂಕುಗಳ ೫೩೯ ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ೧೧೨ ಹಳ್ಳಿಗಳಿಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇದುವರಗ ೧೧೮ ಟ್ಯಾಂಕರ್ಗಳ ಮೂಲಕ ನೀರು ಪೂರಕೆ ಮಾಡಲಾಗಿದೆ. ೭೨೫ ಖಾಸಗಿ ಬೋರ್ವಲ್‌ಗಳನ್ನು ಬಾಡಿಗಗ ಪಡೆಯಲಾಗಿದ್ದು, ಇದರ ಮೂಲಕ ೬೨೨ ಹಳ್ಳಿಗಳಿಗ ನೀರು ಪೂರಕೆ ಮಾಡಲಾಗಿದೆ.


ಒಟ್ಟು ೧೭ ನಗರ ಸ್ಥಳಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ೮೭ ವಾರ್ಡ್‌ಗಳಿಗ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರಕೆ ಮಾಡಲಾಗುತ್ತಿದೆ. ಬಾಡಿಗಗ ಪಡೆದ ಬೋರ್ವಲ್‌ಗಳ ಮೂಲಕ ೨೪ ವಾರ್ಡ್‌ಗಳಿಗ ನೀರು ಸರಬರಾಜು ಮಾಡಲಾಗುತ್ತಿದ್ದು, ೨೦ ಬೋರ್ವಲ್‌ಗಳನ್ನು ಬಾಡಿಗಗ ಪಡೆಯಲಾಗಿದೆ.


ರಾಜ್ಯದಲ್ಲಿ ಪ್ರಸ್ತುತ ೮೪.೧೦ ಲಕ್ಷ ಹೆಕ್ಟ?ರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರಗ ೪೩.೯೮ ಲಕ್ಷ ಹೆಕ್ಟ?ರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಕಳದ ಐದು ವರ್ಷಗಳ ಅವಧಿಯಲ್ಲಿ ಸರಾಸರಿ ೫೧.೩೩ ಲಕ್ಷ ಹೆಕ್ಟ?ರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿತ್ತು.


ಜಿಲ್ಲಯಲ್ಲಿ ಎಲ್ಲರೂ ಟೀಂ ಆಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು ಮುಂಚೂಣಿಯಲ್ಲಿದ್ದು, ತಮ್ಮ ಅಧೀನದ ಅಧಿಕಾರಿಗಳಿಗ ಮಾದರಿಯಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಚಿಂತನೆ, ಆಲೋಚನೆಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ನಿಮ್ಮೆಲ್ಲರದ್ದು.


ಕುಡಿಯುವ ನೀರಿನ ಪೂರಕೆಯನ್ನು ಖಾತ್ರಿಪಡಿಸಲು ಪ್ರತಿ ವಿಧಾನಸಭಾ ವ್ಯಾಪ್ತಿಗ ಹೆಚ್ಚುವರಿಯಾಗಿ ತಲಾ ರೂ.೧ಕೋಟಿ ಒದಗಿಸಲಾಗುವುದು. ಕುಡಿಯುವ ನೀರಿಗ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿಗ ಮೊದಲ ಆದ್ಯತೆ ನೀಡಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.


ಕುಡಿಯುವ ನೀರಿಗ ಯಾವುದೇ ಜಿಲ್ಲಯಲ್ಲಿ ಅನುದಾನದ ಕೊರತೆಯಿರುವುದಿಲ್ಲ. ಕೊರದಿರುವ ಬೋರ್ವಲ್‌ಗಳಿಗ ಪಂಪಿಂಗ್ ಮೆಷಿನ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪ?ಸಲು ಕ್ರಮ ಕೈಗೊಳ್ಳಬೇಕು. ಬೋರ್ವಲ್‌ಗಳಿಗ ವಿದ್ಯುತ್ ಸಂಪರ್ಕಕ್ಕ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗಳು ಸ್ಥಳಯವಾಗಿಯೇ ಕ್ರಮ ಕೈಗೊಳ್ಳಬೇಕು.


ಜಿಲ್ಲಯ ಬರ ಪರಿಸ್ಥಿತಿ ನಿರ್ವಹಣಗ ಜಿಲ್ಲಾಧಿಕಾರಿಗಳಿಗ ಸಂಪೂರ್ಣ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ.ಖಾತೆಯಲ್ಲಿ ಒಟ್ಟು ರೂ.೩೨೯.೬೦ ಕೋಟಿ ಅನುದಾನ ಲಭ್ಯವಿದೆ.
ಜನರು ಗುಳ ಹೋಗುವುದನ್ನು ತಪ್ಪಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಳಯವಾಗಿ ಜನರಲ್ಲಿ ವಿಬಿ ರಾಮ್ ಜಿ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಆರಂಭಿಸಬೇಕು. ವಿಬಿ ರಾಮ್ ಜಿ ಯೋಜನೆಯನ್ನು ರಾಜ್ಯದಲ್ಲಿ ಯಥಾಪ್ರಕಾರ ಅನುಷ್ಠಾನ ಗೊಳಿಸಲಾಗು ತ್ತಿದೆ. ಯಾವುದೇ ಕಾರಣಕ್ಕೂ ಜನರು ಕೂಲಿ ಹುಡುಕಿಕೊಂಡು ಗುಳ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಸೂಚಿಸಿದರು.