ಕಲಬುರಗಿ:ವಿಬಿಜಿ ರಾಮಜಿ ಯೋಜನೆ ಅಡಿಯಲ್ಲಿ ನಿರಂತರವಾಗಿ ಕೆಲಸ ನೀಡಬೇಕು, ಬರಗಾಲ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿ.ಪಂ.ಕಚೇರಿ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕ್ಷೇಮಲಿಂಗ ನರೋಣಾ, ನಾಗೇಂದ್ರ ಕಂಟಿ, ಸಾವಿತ್ರಿ ಮಾಲಗತ್ತಿ, ಗೀತಾ ದಂಡೋತಿ, ಆರತಿ ಬೋಳೆವಾಡ, ಅರುಣ ಮ್ಯಾಗೇರಿ, ಭಾಗ್ಯನಾಥ ನಂದಿಹಳ್ಳಿ, ಇಶ್‍ಅಮ್ಮಾ ಮಲಕೂಡ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.