
ಕಲಬುರಗಿ: ನವ ಕರ್ನಾಟಕ ರೈತ ಸಂಘ ವತಿಯಿಂದ ನಗರ ಹೊರವಲಯದ ಆಳಂದ ರಸ್ತೆಯಲ್ಲಿರುವ ಸಂತೋಷ ಎಸ್.ಗುತ್ತೇದಾರ ಅವರ ಜಮೀನಿನಲ್ಲಿ ಮುಂದಿನ ತಿಂಗಳು ಡಿಸೆಂಬರ 12ರಿಂದ ಮೂರು ದಿನಗಳ ಕಾಲ ಜರುಗಲಿರುವ ರಾಷ್ಟ್ರ ಮಟ್ಟದ ರೈತ ಸಮ್ಮೇಳನ ಮತ್ತು ಕೃಷಿ ಮೇಳದ ಕುರಿತು ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಇಂದು ಪೂರ್ವಭಾವಿ ಸಭೆ ಜರುಗಿತು. ಶ್ರೀನಿವಾಸ ಸರಡಗಿ ಹಿರೇಮಠ ಸಂಸ್ಥಾನದ ಡಾ.ರೇವಣಸಿದ್ಧ ಶಿವಾಚಾರ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ, ಅಧ್ಯಕ್ಷರಾದ ಮಾಲಿಕಯ್ಯ ವಿ. ಗುತ್ತೇದಾರ, ಕಾರ್ಯಾಧ್ಯಕ್ಷರಾದ ದಯಾನಂದ ಪಾಟೀಲ, ಉಪಾಧ್ಯಕ್ಷರಾದ ಬಸವರಾಜ ದೇಶಮುಖ, ಸಂತೋಷ ಎಸ್.ಗುತ್ತೇದಾರ, ಶಿವಕಾಂತ ಮಹಾಜನ, ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಪವನಕುಮಾರ ವಳಕೇರಿ,ಅಶೋಕ ಬಡದಾಳ,ನಾಗಲಿಂಗಯ್ಯ ಮಠಪತಿ ಸೇರಿದಂತೆ ಮತ್ತಿತರರು ಇದ್ದರು.





















