Home ಜಿಲ್ಲೆ ಕಲಬುರಗಿ ಜೂಜಾಟ:ಐವರ ಬಂಧನ

ಜೂಜಾಟ:ಐವರ ಬಂಧನ

ಕಲಬುರಗಿ,ನ.24-ಕಲ್ಲಬೇನೂರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಎಎಸ್‍ಐ ಅಣ್ಣಪ್ಪಾ, ಸಿಬ್ಬಂದಿಗಳಾದ ಈರಣ್ಣ, ವಿಠ್ಠಲ, ಮಹೇಶ ಮತ್ತು ಬಸವರಾಜ ಅವರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ರಾಕೇಶ ಬಿರಾದಾರ, ಖಾನಸಾಬ್ ಮಹ್ಮದ್ ಗೌಸ್ ಮೊಮಿನ್, ನಿಂಗರಾಜ ಗಂಗಾಣಿ, ಸಂಜುಕುಮಾರ ರುದನೂರ ಮತ್ತು ಖಾನಸಾಬ್ ಬಾಬುಮಿಯಾ ಎಂಬುವವರನ್ನು ಬಂಧಿಸಿ 5,510 ರೂ.ನಗದು, ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.