
ಕಲಬುರಗಿ,ನ.24-15 ವರ್ಷದಿಂದ 30 ವರ್ಷ ವಯೋಮಾನದವರಲ್ಲಿ ಅಡಗಿದ ಸುಪ್ತ ಕಲಾ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸುವುದು ಯುವ ಸೌರಭ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ನಾಶಿ ಹೇಳಿದರು.
ನಗರದ ಶರಣಬಸವ ವಿವಿಯ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಶರಣಬಸವ ವಿವಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ಬಸವ ವಿವಿಯ ಕುಲಸಚಿವೆ ಪೆÇ್ರ.ಲಕ್ಷ್ಮಿ ಪಾಟೀಲ ಮಾಕಾ ಅವರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿದರು.
ವಿಜಯಕುಮಾರ ನೇತೃತ್ವದ ತಂಡದ ಡೊಳ್ಳು ಕುಣಿತ ಹಾಗೂ ಶ್ರೀಧರ ಅವರ ತಂಡದ ತಮಟೆ ವಾದನದೊಂದಿಗೆ ವಿವಿಯ ಗೇಟ್ ನಿಂದ ಸಮಾರಂಭ ವೇದಿಕೆ ತನಕ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಸುಮಂಗಲಾ ಎನ್ ರೆಡ್ಡಿ ವೇದಿಕೆಯಲ್ಲಿದ್ದರು.





















