
ಹುಲಸೂರ,ನ.24-ಶಿವಾನಂದ ಸ್ವಾಮೀಜಿ ಅವರ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಡಿ.2 ರಂದು ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಅನುಭವ ಮಂಟಪದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀಗುರು ಬಸವೇಶ್ವರ ಸಂಸ್ಥಾನ ಮಠದ ಟ್ರಸ್ಟ್ ತಿಳಿಸಿದೆ.
ಪ್ರಶಸ್ತಿ ಪುರಸ್ಕøತರು: ಜಗದ್ಗುರು ಅಲ್ಲಮಪ್ರಭು ಶ್ರೀ ಪ್ರಶಸ್ತಿಗೆ ಹುಮನಾಬಾದ್ನ ಸೋಮನಾಥ ಯಾಳವಾರ, ಕಲ್ಯಾಣ ಶ್ರೀಗುರು ಬಸವೇಶ್ವರ ಪ್ರಶಸ್ತಿಗೆ ಕಲಬುರಗಿಯ ಸಿದ್ಧಲಿಂಗೇಶ್ವರ ಬುಕ್ ಡಿಪೊ ಮಾಲೀಕ ಬಸವರಾಜ ಕೊನೇಕ, ವೈರಾಗ್ಯ ನಿಧಿ ಅಕ್ಕಮಹಾದೇವಿ ಪ್ರಶಸ್ತಿಗೆ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ ಹಾಗೂ ಬಸವ ಕನ್ನಡಿಗ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಆಯ್ಕೆಯಾಗಿದ್ದಾರೆ.
ಜಗದ್ಗುರು ಅಲ್ಲಮಪ್ರಭು ಶ್ರೀ, ಕಲ್ಯಾಣ ಶ್ರೀ ಗುರು ಬಸವೇಶ್ವರ ಹಾಗೂ ವೈರಾಗ್ಯ ನಿಧಿ ಅಕ್ಕಮಹಾದೇವಿ ಪ್ರಶಸ್ತಿ ತಲಾ 25 ಸಾವಿರ ನಗದು ಒಳಗೊಂಡಿದ್ದರೆ, ಬಸವ ಕನ್ನಡಿಗ ಪ್ರಶಸ್ತಿಗೆ 50 ಸಾವಿರ ಮೊತ್ತ ನಿಗದಿಪಡಿಸಲಾಗಿದೆ.
ಬೀದರ್ನ ಸುವರ್ಣಾ ಮತ್ತು ಶರಣ ಬಸವರಾಜ ಧನ್ನೂರ ಅವರು ವೈರಾಗ್ಯ ನಿಧಿ ಅಕ್ಕಮಹಾದೇವಿ ಪ್ರಶಸ್ತಿಯ ದಾಸೋಹಿಗಳಾಗಿದ್ದು, ಹುಲಸೂರಿನ ಗುರು ಬಸವ ಕನ್ಸ್ಟ್ರಕ್ಷನ್ನ ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಗಲಾ ಮತ್ತು ಬಸವರಾಜ ಡೋಣಗಾಂವಕರ ಅವರು ಬಸವ ಕನ್ನಡಿಗ ಪ್ರಶಸ್ತಿಯ ದಾಸೋಹಿಗಳಾಗಿದ್ದಾರೆ ಎಂದು ಶಿವಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















