Home ಸುದ್ದಿ ರಾಷ್ಟ್ರೀಯ ಹನುಮಂತನ ಪಾತ್ರವನ್ನು ಐರನ್ ಮ್ಯಾನ್‍ಗೆ ಹೋಲಿಕೆ

ಹನುಮಂತನ ಪಾತ್ರವನ್ನು ಐರನ್ ಮ್ಯಾನ್‍ಗೆ ಹೋಲಿಕೆ

ಮುಂಬೈ,ನ.24-ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ರಾಮಾಯಣ' ಚಿತ್ರವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯುತ್ತಿದ್ದು, ಚಿತ್ರದ ಕೊನೆಯಲ್ಲಿ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅವರ ಒಂದು ಸಣ್ಣ ನೋಟವನ್ನು ಮಾತ್ರ ತೋರಿಸಲಾಗಿದೆ. ಎರಡನೇ ಭಾಗದಲ್ಲಿ ಸನ್ನಿ ಡಿಯೋಲ್ ಪೂರ್ಣ ಪ್ರಮಾಣದ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಕುರಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿದ್ದಾರೆ. ಹನುಮಂತನನ್ನು ತನ್ನ ನೆಚ್ಚಿನ ಪಾತ್ರ ಎಂದು ಬಣ್ಣಿಸಿರುವ ನಮಿತ್ ಮಲ್ಹೋತ್ರಾ, ಭಾರತದಲ್ಲಿ ಆ ಪಾತ್ರಕ್ಕಿರುವ ಜನಪ್ರಿಯತೆಯನ್ನು 'ಐರನ್ ಮ್ಯಾನ್'ಗೆ ಹೋಲಿಸಿದ್ದಾರೆ ಹಾಗೂ ಹನುಮನ ಉಪಸ್ಥಿತಿಯು ಎರಡನೇ ಭಾಗವನ್ನು ಬೇರೆಯದೇ ಹಂತಕ್ಕೆ ಕೊಂಡೊಯ್ಯಲಿದೆ ಎಂದಿದ್ದಾರೆ. ಇನ್ನು ಈ ಪಾತ್ರಕ್ಕೆ ಸನ್ನಿ ಡಿಯೋಲ್ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ನಿತೇಶ್ ತಿವಾರಿ, ಹನುಮಂತನ ಪಾತ್ರಕ್ಕೆ ಮುಗ್ಧತೆಯ ಜೊತೆಗೆ ಕೋಪಗೊಂಡಾಗ ಪರ್ವತವನ್ನೇ ಅಲುಗಾಡಿಸುವಂತಹ ಶಕ್ತಿ ಬೇಕಿದ್ದು, ಸನ್ನಿ ಡಿಯೋಲ್ ಅವರ ಇಮೇಜ್ ಈ ಅಮರ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲಿದೆ ಎಂದು ತಿಳಿಸಿದ್ದಾರೆ. ಮೂಲತಃ 2027ರ ದೀಪಾವಳಿಗೆ ಬಿಡುಗಡೆಯಾಗಬೇಕಿದ್ದ ರಾಮಾಯಣ ಭಾಗ 2′,
ಚಿತ್ರೀಕರಣ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಿರುವುದರಿಂದ 2028ರಲ್ಲಿ ತೆರೆಗೆ ಬರಲಿದೆ ಎಂದು ನಮಿತ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ.