Home ಜಿಲ್ಲೆ ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ: 11 ನಿರ್ದೇಶಕರು ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ: 11 ನಿರ್ದೇಶಕರು ಆಯ್ಕೆ

ಸಂಜೆವಾಣಿ ವಾರ್ತೆ
ಹನೂರು ನ 23 :-
ತಾಲೂಕಿನ ಹಲಗಾಪುರ ಗ್ರಾಮದಲ್ಲಿ ಗೌಡರು ಹಾಗೂ ಮುಖಂಡರ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಶಾಂತಿಯುತವಾಗಿ ನಡೆಯುವ ಮೂಲಕ 11 ನಿರ್ದೇಶಕರು ಆಯ್ಕೆಯಾಗಿದ್ದಾರೆ.


ಚುನಾವಣೆಯಲ್ಲಿ ಸಂಘದ ನಿರ್ದೇಶಕರುಗಳಾಗಿ ಪಿ. ಗುರುಪಾದಸ್ವಾಮಿ, ಎಚ್.ಎಸ್. ಪ್ರಭುಸ್ವಾಮಿ, ಗುರುಸ್ವಾಮಿ, ಮಲ್ಲಣ್ಣ, ವೀರಭದ್ರಪ್ಪ, ಪಿ. ಮಹೇಶ್, ಮಹದೇವ, ಗೋವಿಂದರಾಜು, ಮಲ್ಲು, ಗೀತಾ ಹಾಗೂ ಸುನಂದಾ ಅವರು ಆಯ್ಕೆಯಾದರು. ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯ ನಂತರ ಗೌಡರ ಸ್ವಾಮಿಯವರ ನೇತೃತ್ವದಲ್ಲಿ ಚುನಾಯಿತ ಸದಸ್ಯರೆಲ್ಲರಿಗೂ ಸಿಹಿ ತಿನ್ನಿಸಿ ಅಭಿನಂದಿಸಿ ನೂತನ ನಿರ್ದೇಶಕರು ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಣ ಪಾವತಿ, ಪಶು ಆಹಾರ ಪೂರೈಕೆ ಹಾಗೂ ಉತ್ತಮ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.


ಈ ವೇಳೆ ನೂತನವಾಗಿ ಆಯ್ಕೆಯಾದ ನಿರ್ದೇಶಕರು, ಹಾಲು ಉತ್ಪಾದಕರ ಹಿತರಕ್ಷಣೆಗೆ ಹಾಗೂ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಉಮೇಶ್, ಹಲಗಪ್ಪ, ರಾಚಪ್ಪ, ಅಂಗಡಿ ಹಲಗಪ್ಪ, ಮಹದೇವಸ್ವಾಮಿ, ಗೌಡರ ಕುಮಾರಸ್ವಾಮಿ,ಮಂಡಲ ಅಧ್ಯಕ್ಷರಾದ ವೃಷಭೇಂದ್ರ ಸ್ವಾಮಿ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.