Home ಜಿಲ್ಲೆ ಮೈಸೂರು ನ.29 ರಂದು ್ಲ ವಿಜೃಂಭಣೆಯ ಕನಕದಾಸರ ಜಯಂತೋತ್ಸವ

ನ.29 ರಂದು ್ಲ ವಿಜೃಂಭಣೆಯ ಕನಕದಾಸರ ಜಯಂತೋತ್ಸವ

ಸಂಜೆವಾಣಿ ವಾರ್ತೆ
ತಿ.ನರಸೀಪುರ ನ.23-
ಶ್ರೀ ಭಕ್ತ ಕನಕದಾಸ ಜಯಂತೋತ್ಸವದ ಅಂಗವಾಗಿ ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನವೆಂಬರ್ 29ರ ಭಾನುವಾರ ನಡೆಯಲಿರುವ ಬೃಹತ್ ಕಾರ್ಯಕ್ರಮಕ್ಕೆ ತಾಲೂಕು ಕುರುಬರ ಸಂಘದ ವತಿಯಿಂದ ಪೆÇೀಸ್ಟರ್ ಬಿಡುಗಡೆಗೊಳಿಸಿ, ತಾಲೂಕಿನ ವಿವಿಧ ಹೋಬಳಿಗಳಿಗೆ ತೆರಳಿ ಸಮಾಜದ ಬಂಧುಗಳನ್ನು ಆಹ್ವಾನಿಸಲಾಯಿತು.


ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ನಂಜುಂಡಸ್ವಾಮಿ ಅವರು ಜಯಂತೋತ್ಸವದ ಪ್ರಚಾರ ಪೆÇೀಸ್ಟರ್‍ಗಳನ್ನು ಬಿಡುಗಡೆ ಮಾಡಿದರು. ಬಳಿಕ ಸಂಘದ ಪದಾಧಿಕಾರಿಗಳೊಂದಿಗೆ ಭಾನುವಾರ ಬನ್ನೂರು ಹಾಗೂ ಸೋಸಲೆ ಹೋಬಳಿಗಳಿಗೆ ಭೇಟಿ ನೀಡಿ, ಸಮಾಜದ ಮುಖಂಡರು ಮತ್ತು ಬಂಧುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ನಂಜುಂಡಸ್ವಾಮಿ ಅವರು, “ನವೆಂಬರ್ 29ರಂದು ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕ ಡಾ. ಎಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್, ವಿಧಾನಪರಿಷತ್ ಸದಸ್ಯ ಡಾ. ತಿಮ್ಮಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದರು.
“ಕಾರ್ಯಕ್ರಮದ ಯಶಸ್ಸಿಗಾಗಿ ತಾಲೂಕಿನಾದ್ಯಂತ ಸಂಚರಿಸಿ ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತಿದೆ. ಆದ್ದರಿಂದ ತಾಲೂಕಿನ ಸಮಾಜದ ಬಂಧುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಯಶಸ್ವಿಗೊಳಿಸಬೇಕು” ಎಂದು ಟಿ.ಎಂ.ನಂಜುಂಡಸ್ವಾಮಿ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗೊತ್ತೆಗಾಲ ಬಸವರಾಜು, ಕಾರ್ಯಾಧ್ಯಕ್ಷ ಮಾದೇಶ್, ನಿರ್ದೇಶಕರಾದ ಅರುಣ್ ಕುಮಾರ್, ಅಶ್ವಿನ್, ರವೀಶ್, ಗೋಪಾಲ್, ಮುದ್ದು ಬೀರನಹುಂಡಿ ಮಹೇಶ್, ಎಂ.ಆರ್.ಎಫ್ ಟೈಯರ್ ರವಿ, ಮಂಗಿಪಚ್ಚಿನಹುಂಡಿ ಚಂದ್ರಶೇಖರ್, ಹುಳುಕನಹುಂಡಿ ಸಿದ್ದರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.