Home ಜಿಲ್ಲೆ ಕಾಂಗ್ರೆಸ್ ದುರಾಡಳಿತ ಸರ್ಕಾರ ನಡೆಸುತ್ತಿದೆ – ಬಂಡೆಪ್ಪ ಕಾಶಂಪುರ.

ಕಾಂಗ್ರೆಸ್ ದುರಾಡಳಿತ ಸರ್ಕಾರ ನಡೆಸುತ್ತಿದೆ – ಬಂಡೆಪ್ಪ ಕಾಶಂಪುರ.

ಸಿಂಧನೂರು: ನ.೨೩ -ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಎಲ್ಲಾ ಮೂಲಭೂತ ಸೌಕರ್ಯಗಳ ಬೆಲೆ ಗಗನಕ್ಕೆರಿಸಿ ದುರಾಡಳಿತ ನಡೆಸಿದೆಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.
ನಗರದ ಸತ್ಯ ಗಾರ್ಡನ್ ನಲ್ಲಿ ಜಾತ್ಯತೀತ ಜನತಾದಳ ಪಕ್ಷದಿಂದ ವಿವಿಧ ಘಟಕ ಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ಜಿಲ್ಲಾ ಮತ್ತು ತಾಲೂಕ ಪಂಚಾಯತ ಚುನಾವಣೆ ಪೂರ್ವಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿದ್ದಾರೆ ಈಗ ಯಾರಾದರೂ ಸಾಲ ಮನ್ನಾ ಮಾಡಿದ ಇತಿಹಾಸ ಇದೇನಾ ? ಗ್ಯಾರಂಟಿ ಕೊಟ್ಟಿದ್ದೆವೆ ಎನ್ನುವ ಈ ಸರ್ಕಾರ ಒಂದು ಕೈ ಯಿಂದ ಕಸಿದುಕೊಂಡು ಇನ್ನೊಂದು ಕಡೆ ಗ್ಯಾರಂಟಿಗೆ ಹಾಕುತ್ತಿದೆ.ಸರ್ಕಾರದಲ್ಲಿ ಒಂದು ರೂಪಾಯಿ ಹಣ ಇಲ್ಲ.ಕಾಮಗಾರಿ ಗಳಿಗೆ ಟೆಂಡರ್ ಹಾಕಲು ಗುತ್ತೆದಾರರು ಮುಂದು ಬರುತ್ತಿಲ್ಲ ಕಾರಣ ಹಣ ಇಲ್ಲ. ಬಿಜೆಪಿ – ಜೆಡಿಎಸ್ ಮೈತ್ರಯಾಗಿ ಮುಂದುವರೆಯುತ್ತದೆ ಮತ್ತು ಸಿಂಧನೂರು ಟಿಕೇಟ್ ನಿರ್ಧಾರ ಮಾಡುವುದು ನಾವ್ಯಾರು ಅಲ್ಲ.ಮೋದಿ – ದೇವೇಗೌಡರು ಎಂದರು.ಇಷ್ಟೆಲ್ಲಾ ಜನ ಸೇರಿದ್ದು ನೋಡಿದರೆ ನಾಡಗೌಡರು ಇಗಲೇ ಚುನಾವಣೆ ಬಂದರೆ ನಾವೆಲ್ಲಾ ಸಿದ್ದರಿದ್ದೆವೆ ಎನ್ನುವ ರೀತಿಯಲ್ಲಿ ಸೇರಿದ್ದು ಖುಷಿ ಎಂದರು.
ಇಂದು ಬೆಳಿಗ್ಗೆ ಬೆಲೆ ಏರಿಕೆ ವಿರೋಧಿಸಿ ಮತ್ತು ಸ್ಟಿಂಗ್ ಆಪರೇಶನ್ ತನಿಖೆ ವರದಿ ಬಿಡುಗಡೆ ಗೊಳಿಸುವಂತೆ ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಂತರ ಕೃಷ್ಣ ರಡ್ಡಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ,ರಾಜ್ಯ ಮುಖಂಡರಾದ ರಶ್ಮಿ ರಾಮೇಗೌಡ,ಚಿತ್ರ ನಟಿ ಜಾಹ್ನವಿ ,
ಮಾಜಿ ಸಂಸದ ಶಿವರಾಮೇಗೌಡ ,ಮಾಜಿ ಶಾಸಕ ವೆಂಕಟಪ್ಪ ನಾಯಕ,ಜೆಡಿಎಸ್ ಜಿಲ್ಲಾ ಅದ್ಯಕ್ಷ ವಿರೂಪಾಕ್ಷಿ ,ತಾಲೂಕ ಅಧ್ಯಕ್ಷ ಬಸವರಾಜ ನಾಡಗೌಡ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.