Home ಜಿಲ್ಲೆ ಕಲಬುರಗಿ ಮುಖ್ಯೋಪಾಧ್ಯಾಯರಾಗಿ ನಿಯೋಜನೆ ಗೊಂಡ ಬಣಗಾರ್ ಅವರಿಗೆ ಬೀದಿ ವ್ಯಾಪಾರಿಗಳ ಸಂಘದಿಂದ ಸನ್ಮಾನ

ಮುಖ್ಯೋಪಾಧ್ಯಾಯರಾಗಿ ನಿಯೋಜನೆ ಗೊಂಡ ಬಣಗಾರ್ ಅವರಿಗೆ ಬೀದಿ ವ್ಯಾಪಾರಿಗಳ ಸಂಘದಿಂದ ಸನ್ಮಾನ

ಕಲಬುರಗಿ: ಇಲ್ಲಿನ ಶರಣ ನಗರದ ಮಹಾದೇವಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಸ್ ಬಣಗಾರ್ ಅವರು, ಮುಖ್ಯೋಪಾಧ್ಯಾಯರಾಗಿ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಬೀದಿವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು, ಮುಖಂಡರು ಒಟ್ಟಾಗಿ ಸೇರಿ ಬಣಗಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಜಗನ್ನಾಥ್ ಎಸ್. ಸೂರ್ಯವಂಶು ಅವರ ನೆತೃತ್ವದಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಶೇಖರ್ ಸಿಂಗ್ ಸಿಕಲಿಗರ್, ನಿವೃತ್ತ ಅರಣ್ಯಾಧಿಕಾರಿ ವೀರಣ್ಣ ಪಟ್ಟಿದಾರ್, ನ್ಯಾಯವಾದಿಗಳಾದ ಚಂದ್ರಶೇಖರ್ ಪಾಟೀಲ್, ಮತ್ತು ಆನಂದ್ರಾಯ ಬಿಲಗುಂದಿ, ಸಂಜೀವ್ ಕುಮಾರ್ ಬಿಲಗುಂದಿ ಹಾಗೂ ಜಗತ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಎಸ್.ಎಸ್. ಬಣಗಾರ್ ಅವರು, ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿರುವುದು ಸಂತಸದ ವಿಚಾರವಾಗಿದ್ದು, ಅವರ ಮುಂದಿನ ಶೈಕ್ಷಣಿಕ ಸೇವೆ ಯಶಸ್ವಿಯಾಗಲಿ. ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಅವರ ಮಾರ್ಗದರ್ಶನ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು. ನಂತರ ಗಣ್ಯರೆಲ್ಲರೂ ಸೇರಿಕೊಂಡು ಎಸ್ ಎಸ್ ಬಣಗಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.