
ಸಿರವಾರ.ನ.೨೩- ಪಟ್ಟಣದ ವಾರ್ಡ್ ನಂ ೦೩ ಕೃಷ್ಣ ನಗರದಲ್ಲಿ ಕುಡಿಯುವ ನೀರು ಹಾಗೂ ಮೂಲಭೂತ. ಸೌಕರ್ಯಗಳನ್ನು ಒದಗಿಸುವಂತೆ ಪ.ಪಂಚಾಯತಿ ವಾರ್ಡ ನಂ ೩ ಸದಸ್ಯರಿಗೆ, ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ.
ಪಟ್ಡಣದ ವಾರ್ಡ ನಂ ೦೩ ಕೃಷ್ಣಾ ನಗರ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ. ಕುಡಿಯುವ ನೀರಿನ ಸೌಲಭ್ಯವಿಲ, ಈ ಹಿಂದೆ ೨೪/೦೪/೨೦೨೬ ರಂದು ಪ.ಪಂಚಾಯತಿಗೆ ಈ ಕುರಿತು ಮನವಿ ಪತ್ರ ನೀಡಲಾಗಿದೂ ಇಲ್ಲಿಯ ವರೆಗೂ ವಾರ್ಡ್ ನಂ ೦೩ ಕೃಷ್ಣಾ ನಗರಕ್ಕೆ ಸಿಬ್ಬಂದಿಗಳಾಗಲಿ ಅಧಿಕಾರಿಗಳಾಗಲಿ ಬೇಟಿ ನೀಡದೆ ನಿರ್ಲಕ್ಷ ವಹಿಸಿದಾರೆ ಬೇಸಿಗೆ ಪ್ರಾರಂಭವಾಗುತ್ತಿದ್ದು ಕುಡಿಯುವ ನೀರಿನ್ನು ಒದಗಿಸಬೇಕಾಗಿ ವಿನಂತಿ, ಪ್ರತಿದಿನ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವುದು.ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ಸ್ವಚ್ಛಗೊಳಿಸುವುದು. ಬೀದಿ ದೀಪಗಳನ್ನು ಅಳವಡಿಸಿ ನಿರ್ವಹಣೆ ಮಾಡುವುದು.೫. ವಾರ್ಡ್ನಲ್ಲಿ ಸ್ವಚ್ಛತೆ ಮತ್ತು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವುದು.ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ೧೦ ದಿನಗಳ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿಂದ್ದಾರೆ.
ಈಸದರ್ಭದಲ್ಲಿ ಪ.ಪಂಚಾಯತಿ ಸದಸ್ಯ ಹಸೇನ ಅಲಿಸಾಬ್, ರಾಜು, ವೆಂಕಟೇಶ ದೊರೆ, ಚಂದ್ರಶೇಖರ ಹಡಪದ್, ಕುತುಬುದ್ದಿನ್ ಮೇಸ್ತ್ರಿ, ಪ್ರಕಾಶ ಕಾರ್ಪೆಂಟರ್, ಅಮರೇಶ,ಮುಸ್ತಾಪ್, ಎಂ.ಡಿ. ತಾಸಿಂ, ರಾಜು ಮ್ಯಾದಾರ್,ಚನ್ನಯ್ಯಸ್ವಾಮಿ,ಶಿವು ಟೇಲರ್,ವೆಂಕಟೇಶ ರಾಠೋಡ್, ಬಸವಲಂಬಾಣಿ, ವಿಠೋಬ್, ವೆಂಕಟೇಶ ಇನ್ನಿತರರು ಇದರು.





















