Home ಜಿಲ್ಲೆ ಮಂಗಳೂರು ಸುಳ್ಯ ನಗರದ ರಸ್ತೆ, ಚರಂಡಿ ದುರಸ್ತಿ ಪಡಿಸುವಂತೆ ಅಟೋ ಚಾಲಕರಿಂದ ಶಾಸಕರಿಗೆ ಮನವಿ

ಸುಳ್ಯ ನಗರದ ರಸ್ತೆ, ಚರಂಡಿ ದುರಸ್ತಿ ಪಡಿಸುವಂತೆ ಅಟೋ ಚಾಲಕರಿಂದ ಶಾಸಕರಿಗೆ ಮನವಿ

ಸುಳ್ಯ:ಸುಳ್ಯ ನಗರದ ರಸ್ತೆ, ಚರಂಡಿ ದುರಸ್ತಿ ಪಡಿಸುವಂತೆ ಅಟೋ ಚಾಲಕರು ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸುಳ್ಯ ನಗರ ಪಂಚಾಯಿತಿಗೆ ವ್ಯಾಪ್ತಿಗೆ ಒಳಪಟ್ಟ ರಸ್ತೆಗಳು ಎಕ್ಕುಟ್ಟಿ ಹೋಗಿದೆ, ರಸ್ತೆ ಬದಿಯ ಚರಂಡಿ ಸರಿಪಡಿಸದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಹಾಗೂ ಅಟೋ ರಿಕ್ಷಾ ಚಾಲಕರಿಗೆ ವಾಹನ ಚಲಾಯಿಸಲು ತೊಂದರೆ ಆಗುತಿದೆ. ಆದುದರಿಂದ ರಸ್ತೆ ಹಾಗೂ ಚರಂಡಿ ದುರಸ್ತಿ ಶೀಘ್ರ ಕೈಗೊಳ್ಳಬೇಕು ಎಂದು ಬಿಎಂಎಸ್ ಸಂಯೋಜಿತ ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಶಾಸಕಿ ಭಾಗೀರಥಿ ಮುರುಳ್ಯ ಹಾಗು ನಗರ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್ ಮಂಜುಳ ಎಂ.ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೂಡಲೇ ರಸ್ತೆ ಮತ್ತು ಚರಂಡಿ ದುರಸ್ತಿ ಶೀಘ್ರ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್. ಎಂ, ಕೋಶಾಧಿಕಾರಿ ರವಿ ಎಸ್. ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ, ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ನಿರ್ದೇಶಕರಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ ಕಿರಣ್ ಬೆಟ್ಟಂಪಾಡಿ ಮತ್ತಿತರರು ಉಪಸ್ಥಿತರಿದ್ದರು.