
ಬೀದರ, ಆ ೦೬ : ಜಿಲ್ಲೆಯಾದ್ಯಂತ ಎಸ್‌ಐಆರ್ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಎನುಮರೇಶನ್ ಹಾಗೂ ಡಿಜೈಟೈಜೇಶನ್ ಬಗ್ಗೆ ಹಾಗೂ ಸ್ಥಳಾಂತರಗೊAಡ, ಗೈರಾದ ಮೃತ ಹಾಗೂ ನಕಲು ಮತದಾರರ ಕುರಿತ್ತಾದ ವಿವರಗಳನ್ನು ಕಳುಹಿಸಲಾಗುತ್ತಿದ್ದು, ಎನುಮರೇಶನ್ ನಮೂನೆ ನೀಡಲು ಆಗಸ್ಟ್ ೮ ಕೊನೆ ದಿನಾಂಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಎಸ್.ಐ.ಆರ್ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಈಗಾಗಲೇ ೧೨,೧೨,೯೯೩ (ಶೇ.೮೨.೯೭) ರಷ್ಟು ಡಿಜಿಟೈಜೇಶನ್ ಪ್ರಗತಿಯಾಗಿರುತ್ತದೆ.
ಬಿಎಲ್‌ಎಗಳು ಹಾಗೂ ಎಸ್‌ಐಆರ್ ಸಿಬ್ಬಂದಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಯಾರಾದರೂ ಅರ್ಹ ಮತದಾರರು ಒಟ್ಟು ಹೋದಲ್ಲಿ ಆಗಸ್ಟ್ ೮ ಒಳಗಾಗಿ ಎನಮರೇಶನ್ ನಮೂನೆ ನೀಡಬೇಕಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೋಂಡು ಅರ್ಹ ಮತದಾರರು ತಪ್ಪಿ ಹೋಗದಂತೆ ನೋಡಿಕೊಳ್ಳಬೇಕೆಂದರು.
೧೨೦೦ ಕ್ಕಿಂತ ಹೆಚ್ಚು ಮತದಾರರು ಹೊಂದಿದ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ೩೦ ಹೊಸ ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ಆಗಸ್ಟ್ ೧೭ ರಂದು ಕೊನೆಯ ಮತದಾರರ ಡ್ರಾಫ್ ಪ್ರಕಟವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ೩೧೭೮೦ ಮೃತ, ೨೨೫೫೬ ಗೈರಾದ, ೧೬೩೨೩೫ ಪರ್ಮನೆಂಟಾಗಿ ಸ್ಥಳಾಂತರಗೊAಡ ಹಾಗೂ ಇತರೆ ೧೧೪೨೫ ಹಾಗೂ ೧೬೭೦೬ ನಕಲು ಹೊಂದಿದ ಮತದಾರರು ಸೇರಿದಂತೆ ಒಟ್ಟು ೨೪೫೭೦೨ ಮತದಾರರು ಹೊರಗುಳಿದಿದ್ದಾರೆ. ಈ ಎಲ್ಲ ವಿವರಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರತಿವಾರ ಸಲ್ಲಿಸಲಾಗುತ್ತದೆ. ಯಾರಾದರೂ ಅರ್ಹ ಮತದಾರರು ಹೊರಗಳಿದಿದ್ದಾರೆ ಅಂಥವರ ಬಗ್ಗೆ ಬಿಎಲ್‌ಎಗಳನ್ನು ಸಂಪರ್ಕಿಸಬಹುದಾಗಿದೆ.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

































