
ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾಗಿರುವ ಡಾ.ಖಮರ ಉಲ್ ಇಸ್ಲಾಂ ಹಾಗರಗಾ 50/50 ವಸತಿ ಅಭಿವೃದ್ಧಿ ಯೋಜನೆಯ ನಿವೇಶನಗಳನ್ನು ಇಲ್ಲಿನ ಗುವಿವಿ ಡಾ.ಅಂಬೇಡ್ಕರ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಕುಡಾ ಅಧ್ಯಕ್ಷ ಮಜರ ಆಲಂ ಖಾನ, ಡಿಸಿ ಇಕ್ರಮ ಶರೀಫ್, ಎಸ್.ಪಿ ಅಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತರಾದ ಅವಿನಾಶ ಸಿಂಧೆ, ಶಾಸಕ ಬಸವರಾಜ ಮತ್ತಿಮಡು ಕುಡಾ ಆಯುಕ್ತರು ಸೇರಿದಂತೆ ಹಲವರಿದ್ದರು.































