
ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ಬೆಂಗಳೂರಿನಲ್ಲಿ ಆ.೬ರಿಂದ ೧೨ ರವರೆಗೆ ಸಂಘಟಿಸಿದ ೧೯ ವರ್ಷದೊಳಗಿನ ಮಹಿಳೆಯರ ರಾಜ್ಯಮಟ್ಟದ ಅಂತರ ವಲಯ ಕ್ರಿಕೆಟ್ ಟೂರ್ನಿಗಾಗಿ ಪ್ರಕಟಿಸಲಾಗಿದ ತಂಡದಲ್ಲಿ ರಾಯಚೂರು ವಲಯ ವಿವಿಧ ಜಿಲ್ಲೆಗಳ ಆರು ಬಾಲಕಿಯರು ಆಯ್ಕೆಯಾಗಿದ್ದಾರೆ.
ಮುಫೆಸೆಲ್ -೧೧ ತಂಡಕ್ಕೆ ಪ್ರಿಯಾ ಚವ್ಹಾಣ್ ವಿಜಯಪುರ, ರಾಧಿಕಾ ರಾಠೋಡ್ ವಿಜಯಪುರ, ದಿಶಾ ದರ್ಗಿ ಕಲಬುರಗಿ ಹಾಗೂ ಕಂಬೌAಡ್ ಮುಫೆಸೆಲ್-೧೧ ತಂಡಕ್ಕೆ ಖುಷಿ ಸಿಂಧನೂರ, ಜೈಶಾ ಆಶೀಫ್ ನಾಗರಕಟ್ಟಿ ವಿಜಯಪುರ, ತನುಶ್ರೀ ಪ್ರಕಾಶ ಹಿಜಾರಿ ವಿಜಯಪುರ
ಬಾಲಕಿಯರ ಸಾಧನೆಗೆ ಕೆಎಸ್‌ಸಿಎ ರಾಯಚೂರು ವಲಯದ ಅಧ್ಯಕ್ಷ ಚಂದ್ರಶೇಖರ ಮೈಲಾರೆ, ಸಂಚಾಲಕ ಕುಶಾಲ ಪಾಟೀಲ್ ಗಾದಗಿ, ಮಾಧ್ಯಮ ಸಂಯೋಜಕ ಅನೀಲಕುಮಾರ ದೇಶಮುಖ ಹರ್ಷ ವ್ಯಕ್ತಪಡಿಸಿದ್ದಾರೆ.

































