ಕಲಬುರಗಿ: ಗುಲಬರ್ಗ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ ಡಾ.ಖಮರ್ ಉಲ್ ಇಸ್ಲಾಂ ಹಾಗರಗಾ 50:50 ರೈತರ ಸಹಭಾಗಿತ್ವದ ವಸತಿ ಯೋಜನೆಯಡಿ ಲಾಟರಿ ಮೂಲಕ ನಿವೇಶನ ಹಂಚಿಕೆಯ 2 ನೇ ದಿನದ ಕಾರ್ಯಕ್ರಮಕ್ಕೆ ಯುನಿವರ್ಸಿಟಿ ಠಾಣೆ ಪಿಐ ಚಂದ್ರಕಾಂತ ತಿಗಡಿ ಅವರು ಲಾಟರಿ ಎತ್ತುವ ಮೂಲಕ ಚಾಲನೆ ನೀಡಿದರು.ಕುಡಾ ಅಧ್ಯಕ್ಷ ಮಜರ್ ಅಲಂ ಖಾನ್, ಸಬ್ ಅರ್ಬನ್ ಠಾಣೆ ಪಿಐ ನಟರಾಜ ಲಾಡ್,ಅಹಮರ್ ಉಲ್ ಇಸ್ಲಾಂ,ಟಬ್ಬೂಖಾನ್ ಮತ್ತು ಇತರರು ಉಪಸ್ಥಿತರಿದ್ದರು.