Home ಸುದ್ದಿ ರಾಷ್ಟ್ರೀಯ ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಭಾರೀ ಮೆಚ್ಚುಗೆ

ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಭಾರೀ ಮೆಚ್ಚುಗೆ

ಮುಂಬೈ, ಆ. 3- ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ನ ಅತ್ಯಂತ ಜನಪ್ರಿಯ ಹಾಗೂ ಪ್ರೀತಿಯ ಸೂಪರ್‍ಹೀರೋ ಪಾತ್ರವಾದ ಸ್ಪೈಡರ್ ಮ್ಯಾನ್, ಪ್ರಸ್ತುತ ಭಾರತೀಯ ಬಾಕ್ಸ್ ಆಫೀಸ್‍ನಲ್ಲಿ ಸೃಷ್ಟಿಸುತ್ತಿರುವ ಅಭೂತಪೂರ್ವ ಸುಂಟರಗಾಳಿಯನ್ನು ಯಾವುದೇ ಸಿನಿಮಾ ಪ್ರೇಮಿ ಖಂಡಿತವಾಗಿಯೂ ಊಹಿಸಿರಲು ಸಾಧ್ಯವಿಲ್ಲ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದ್ದ ವಿಷಯವೇ ಆಗಿದ್ದರೂ, ಭಾರತದ ಚಿತ್ರಮಂದಿರಗಳಲ್ಲಿ ಇದನ್ನು ವೀಕ್ಷಿಸಲು ಇಷ್ಟೊಂದು ಬೃಹತ್ ಮಟ್ಟದ ಕ್ರೇಜ್ ಮತ್ತು ಜನಸ್ತೋಮ ಹರಿದುಬರುತ್ತದೆ ಎಂದು ಸ್ವತಃ ಚಿತ್ರದ ನಿರ್ಮಾಪಕರು ಸಹ ನಿರೀಕ್ಷಿಸಿರಲಿಲ್ಲ. ಟಾಮ್ ಹಾಲೆಂಡ್ ಅಭಿನಯದ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರವು ಭಾರತದಲ್ಲಿ ಕಲೆಕ್ಷನ್ ಮಾಡುತ್ತಿರುವ ವೇಗ ನಿಜಕ್ಕೂ ಪ್ರತಿಯೊಬ್ಬರನ್ನೂ ಬೆರಗುಗೊಳಿಸುವಂತಿದೆ.


ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರವು ಎಂ ಸಿ ಯು ನ ಸಾರ್ವಕಾಲಿಕ ಅತಿದೊಡ್ಡ ಬ್ಲಾಕ್‍ಬಸ್ಟರ್ ಸಿನಿಮಾ ಎಂದೇ ಹೆಸರುವಾಸಿಯಾಗಿದ್ದ ‘ಅವೆಂಜರ್ಸ್: ಎಂಡ್‍ಗೇಮ್’ ಹೊಂದಿದ್ದ ಬೃಹತ್ ದಾಖಲೆಯನ್ನು ಧೂಳೀಪಟ ಮಾಡಿತು. ಪ್ರದರ್ಶನದ ಮೊದಲ ದಿನವೇ ಭಾರತದಲ್ಲಿ 60 ಕೋಟಿ ಗಳಿಸುವ ಮೂಲಕ ಅಚ್ಚರಿಯ ಶುಭಾರಂಭ ಕಂಡಿತು. ತದನಂತರದ ಎರಡು ದಿನಗಳಲ್ಲಿ, ಅಂದರೆ ಬರೀ ಕೆಲಸದ ದಿನಗಳಾಗಿದ್ದರೂ ಸಹ, ‘ಸ್ಪೈಡರ್ ಮ್ಯಾನ್’ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‍ನಲ್ಲಿ ಬರೋಬ್ಬರಿ 100 ಕೋಟಿ ನಿವ್ವಳ ಸಂಗ್ರಹವನ್ನು ಸಾಧಿಸಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಸಾಧಾರಣ ಕೆಲಸದ ದಿನಗಳಲ್ಲೇ ಈ ಮಟ್ಟದ ಪ್ರದರ್ಶನ ಕಂಡ ಈ ಚಿತ್ರಕ್ಕೆ ನಿಜವಾದ ಬಾಕ್ಸ್ ಆಫೀಸ್ ಸ್ಫೋಟ ಸಂಭವಿಸಿದ್ದು ವಾರಾಂತ್ಯದ ಶನಿವಾರ ಮತ್ತು ಭಾನುವಾರಗಳಲ್ಲಿ.


ಚಿತ್ರವು ತನ್ನ ಮೂರನೇ ದಿನವಾದ ಶನಿವಾರದಂದು ಬರೋಬ್ಬರಿ 70 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ Àಮೂಲಕ ಕೇವಲ ಮೂರೇ ದಿನಗಳಲ್ಲಿ ತನ್ನ ಒಟ್ಟು ನಿವ್ವಳ ಗಳಿಕೆಯನ್ನು 180 ಕೋಟಿಗೆ ಏರಿಸಿಕೊಂಡಿತು. ಇನ್ನು ಪ್ರಸಿದ್ಧ ಟ್ರ್ಯಾಕಿಂಗ್ ವೆಬ್‍ಸೈಟ್ ಸ್ಯಾಕ್‍ನಿಲ್ಕ್ ವರದಿಯ ಪ್ರಕಾರ, ನಾಲ್ಕನೇ ದಿನವಾದ ಭಾನುವಾರ ಹಿಂದಿನ ಎಲ್ಲಾ ದಿನಗಳ ದಾಖಲೆಗಳನ್ನು ಮೀರಿಸುವಂತೆ ಅತಿ ದೊಡ್ಡ ಕಲೆಕ್ಷನ್ ತಂದುಕೊಟ್ಟಿತು. ಟಾಮ್ ಹಾಲೆಂಡ್ ಅಭಿನಯದ ಈ ಸಾಹಸಮಯ ಚಿತ್ರವು ಭಾನುವಾರದಂದೇ ಬರೋಬ್ಬರಿ 76 ರಿಂದ 80 ಕೋಟಿ ನಿವ್ವಳ ಗಳಿಕೆಯನ್ನು ಕಂಡಿದ್ದು, ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಸಂಗ್ರಹವು 250 ಕೋಟಿಯ ಗಡಿಯನ್ನು ಸುಲಭವಾಗಿ ದಾಟಿದೆ. ಇನ್ನು ದೇಶಾದ್ಯಂತ ಇದರ ಒಟ್ಟು ಜಿಎಸ್‍ಟಿ ಸೇರಿದಂತೆ ಗ್ರೋಸ್ ಸಂಗ್ರಹವು ಈಗಾಗಲೇ 300 ಕೋಟಿಗಿಂತಲೂ ಹೆಚ್ಚಾಗಿದೆ.


ಈ ಭರ್ಜರಿ ಗಳಿಕೆಯೊಂದಿಗೆ ಬ್ರಾಂಡ್ ನ್ಯೂ ಡೇ' ಚಿತ್ರವು ಭಾರತದಲ್ಲಿ ಮಾರ್ವೆಲ್ ಸಂಸ್ಥೆಯ ಎರಡನೇ ಅತಿದೊಡ್ಡ ಯಶಸ್ವಿ ಚಿತ್ರವಾಗಿದ್ದ 'ಅವೆಂಜರ್ಸ್: ಇನ್ಫಿನಿಟಿ ವಾರ್' ಗಳಿಕೆಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದೆ. ಪ್ರಸ್ತುತ ಭಾರತದಲ್ಲಿಅವೆಂಜರ್ಸ್: ಎಂಡ್‍ಗೇಮ್’ ಮತ್ತು ‘ಅವತಾರ್’ ರೀತಿಯ ಬೃಹತ್ ಚಿತ್ರಗಳ ಜೀವಿತಾವಧಿಯ ಒಟ್ಟು ಕಲೆಕ್ಷನ್‍ಗಳ ದಾಖಲೆಗಳು ಮಾತ್ರ ಉಳಿದುಕೊಂಡಿದ್ದು, ಇವುಗಳನ್ನು ಮೀರಿಸಲು ‘ಸ್ಪೈಡರ್ ಮ್ಯಾನ್’ ಚಿತ್ರಕ್ಕೆ ಇನ್ನು ಕನಿಷ್ಠ 10 ದಿನಗಳ ಸುವರ್ಣ ಅವಕಾಶವಿದೆ. ಏಕೆಂದರೆ ಆಗಸ್ಟ್ 14 ರವರೆಗೆ ಭಾರತೀಯ ಚಿತ್ರರಂಗದಲ್ಲಿ ‘ಸ್ಪೈಡರ್ ಮ್ಯಾನ್’ ಚಿತ್ರಕ್ಕೆ ಪ್ರಬಲ ಸ್ಪರ್ಧೆ ನೀಡಬಲ್ಲ ಯಾವುದೇ ದೊಡ್ಡ ಮಟ್ಟದ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಭಾರತೀಯ ಚಿತ್ರಪ್ರೇಕ್ಷಕರನ್ನು ಪೀಟರ್ ಪಾರ್ಕರ್ ಹಾಗೂ ಆತನ ಸಾಹಸಮಯ ಕಥೆ ಇನ್ನೆಷ್ಟು ಎತ್ತರಕ್ಕೆ ಕರೆದೊಯ್ಯಲಿದೆ ಮತ್ತು ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್‍ನಲ್ಲಿ ಇನ್ಯಾವ ಹೊಸ ಇತಿಹಾಸವನ್ನು ನಿರ್ಮಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.