Home ಪಾಕವಿಧಾನ ಚಿಕನ್ ಕುರ್ಮಾ

ಚಿಕನ್ ಕುರ್ಮಾ

ಬೇಕಾಗುವ ಸಾಮಗ್ರಿಗಳು
*ಬೋನ್‍ಲೆಸ್ ಚಿಕನ್ – 1/2 ಕೆ.ಜಿ,
*ಈರುಳ್ಳಿ -1
*ಟೊಮೆಟೊ 1,
*ಪುದೀನ 1 ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ತೆಂಗಿನಕಾಯಿ ತುರಿ 1 ಚಿಕ್ಕ ಕಪ್
*ಗೋಡಂಬಿ – 10,
*ಧನಿಯಾ – 1 ಚಮಚ
*ಅಚ್ಚಖಾರದ ಪುಡಿ – ಒಂದೂವರೆ ಚಮಚ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ
*ಗಸಗಸೆ -1 ಚಮಚ, ಚಕ್ಕೆ 2-3
*ಲವಂಗ – 3, *ಏಲಕ್ಕಿ -1-2
*ಸೋಂಪು – 1/2 ಚಮಚ,
*ಅರಿಶಿಣ 1 ಚಮಚ
*ಉಪ್ಪು – ರುಚಿಗೆ ತಕ್ಕಷ್ಟು,
*ಎಣ್ಣೆ 50
*ನೀರು – ಸ್ವಲ್ಪ
ಮಾಡುವ ವಿಧಾನ :
ಪ್ಯಾನ್‍ನಲ್ಲಿ ಚಕ್ಕೆ, ಲವಂಗ, ಸೋಂಪು, ಧನಿಯಾ, ಏಲಕ್ಕಿಯನ್ನು ಘಮ್ಮೆನ್ನುವಂತೆ ಹುರಿಯಿರಿ. ತಣ್ಣಗಾದ ನಂತರ ತೆಂಗಿನಕಾಯಿ ತುರಿ, ಗಸಗಸೆ, ಗೋಡಂಬಿಯಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಕಡಾಯಿಗೆ ಎಣ್ಣೆ ಹಾಕಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‍ಗಳನ್ನು ಚೆನ್ನಾಗಿ ಬಾಡಿಸಿ. ಚಿಕ್ಕದಾಗಿ ಹೆಚ್ಚಿದ ಟೊಮೆಟೋ, ಚಿಕನ್ ಹಾಕಿ ಪ್ರೈ ಮಾಡಿ. ಪ್ರೈಮಾಡಿದ ಚಿಕನ್‍ಗೆ ಅರಿಶಿಣ, ಅಚ್ಚಖಾರದ ಪುಡಿ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ರುಬ್ಬಿದ ಮಸಾಲೆಯನ್ನು ಬೆರೆಸಿ. ರುಚಿಗೆ ತಕ್ಕಷ ಉಪ್ಪು, ಹಾಕಿ ಕಲಸಿ, ಮುಚ್ಚಳ ಮುಚ್ಚಿ ಬೇಯಿಸಿ. ಇದರ ಮೇಲೆ ಕೊತ್ತಂಬರಿ ಸೊಪ್ಪು, ಪುದೀನ ಉದುರಿಸಿದರೆ ಚಿಕನ್ ಕುರ್ಮಾ ತಿನ್ನಲು ಸಿದ್ಧ.