Home ಜಿಲ್ಲೆ ವಿಬಿ ಜಿ ರಾಮ್ ಜಿ. ಯೋಜನೆ ಕುರಿತು ಸಿಇಓ ಗಿರೀಶ್ ಬದೋಲೆ ಜಾಗೃತಿ, ಕಾಮಗಾರಿ ಸ್ಥಳ...

ವಿಬಿ ಜಿ ರಾಮ್ ಜಿ. ಯೋಜನೆ ಕುರಿತು ಸಿಇಓ ಗಿರೀಶ್ ಬದೋಲೆ ಜಾಗೃತಿ, ಕಾಮಗಾರಿ ಸ್ಥಳ ಪರಿಶೀಲನೆ

ಬೀದರ್: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಗಿರೀಶ್ ದಿಲೀಪ್ ಬದೋಲೆ ಅವರು ಸೋಮವಾರ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ‘ವಿಕಸಿತ ಭಾರತ-ಜಿ ರಾಮ್ ಜಿ’ (ವಿಬಿ ಜಿ ರಾಮ್ ಜಿ) ಕಾಯಿದೆ, ೨೦೨೫ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
?ಪರಿಶೀಲನೆ ವೇಳೆ ಓಒಒS ಹಾಜರಾತಿ ದಾಖಲೆಗಳನ್ನು ಪರಿಶೀಲಿಸಿದ ಅವರು, ಸ್ಥಳದಲ್ಲಿದ್ದ ಕಾರ್ಮಿಕರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಉದ್ಯೋಗ ಯೋಜನೆಯಲ್ಲಿ ಆಗಿರುವ ಪ್ರಮುಖ ಪರಿಷ್ಕರಣೆಗಳ ಬಗ್ಗೆ ಜಾಗೃತಿ ಮೂಡಿಸಿದರು.

?ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿಬಿ-ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಭಾಗದಲ್ಲಿ ಜೀವನೋಪಾಯದ ಭದ್ರತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಈ ವರ್ಷ ಯೋಜನೆಯಡಿ ವಾರ್ಷಿಕ ಉದ್ಯೋಗದ ಹಕ್ಕನ್ನು ೧೦೦ ದಿನಗಳಿಂದ ೧೨೫ ದಿನಗಳಿಗೆ ಹೆಚ್ಚಿಸಲಾಗಿದ್ದು, ದೈನಂದಿನ ವೇತನವನ್ನು ?೩೭೦ ರಿಂದ ?೩೮೨ ಕ್ಕೆ ಏರಿಸಲಾಗಿದೆ.
?ನೂತನ ಬದಲಾವಣೆಗಳಿಂದಾಗಿ ಒಂದು ಜಾಬ್ ಕಾರ್ಡ್ ಹೊಂದಿರುವ ಕುಟುಂಬವು ವಾರ್ಷಿಕವಾಗಿ ಗರಿಷ್ಠ ?೪೭,೭೫೦ ಗಳಿಸಲು ಅವಕಾಶವಾಗಿದೆ. ಪ್ರಸಕ್ತ ವರ್ಷ ಜಿಲ್ಲಾದ್ಯಂತ ೩೧೮ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ವೇತನದ ಕೆಲಸದಿಂದ ೬೦ ದಿನಗಳ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.? ವೇತನ ಪಾವತಿಯಲ್ಲಿ ಪಾರದರ್ಶಕತೆಗಾಗಿ ಮೇಟ್ ಮತ್ತು ಕ್ಷೇತ್ರ ಅಧಿಕಾರಿಗಳು ಓಒಒS ಮೂಲಕ ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳಾದ ಸೋಕ್ ಪಿಟ್, ಕೃಷಿ ಹೊಂಡ, ಜಾನುವಾರು ಶೆಡ್, ಕೃಷಿ ಭೂಮಿ ಬಂಡಿAಗ್ ಹಾಗೂ ಸಮುದಾಯ ಕಾಮಗಾರಿಗಳಾದ ಕೆರೆ ಹೂಳೆತ್ತುವಿಕೆ ಸೇರಿದಂತೆ ಜಲಸಂರಕ್ಷಣಾ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

?ಈ ತಪಾಸಣೆ ವೇಳೆಯಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಬೀರೇಂದ್ರ ಸಿಂಗ್ ಠಾಕೂರ್, ತಾಲೂಕು ಇಒ ಮಾಣಿಕ್ ರಾವ್ ಪಾಟೀಲ್, ಯೋಜನೆ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರ್, ಜನವಾಡ ಪಿಡಿಒ ಜಗನ್ನಾಥ್, ತಾಂತ್ರಿಕ ಸಂಯೋಜಕ ವಿಷ್ಣು ಕುಲಕರ್ಣಿ, ಐಇಸಿ ಸಂಯೋಜಕ ಸತ್ಯಜೀತ್, ಇಂಜಿನಿಯರ್ ಸುಧಾಕರ್, ಗ್ರಾಮ ಕಾಯಕ ಮಿತ್ರ ಸರಸ್ವತಿ ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು