Home ಕ್ರೀಡೆ ವೈಭವ್ ಸೂರ್ಯವಂಶಿಗೆ ಈಸ್ಟ್ ಝೋನ್ ಉಪನಾಯಕ ಪಟ್ಟ: ದುಲೀಪ್ ಟ್ರೋಫಿಗೆ ಇಶಾನ್ ಕಿಶನ್ ನಾಯಕ

ವೈಭವ್ ಸೂರ್ಯವಂಶಿಗೆ ಈಸ್ಟ್ ಝೋನ್ ಉಪನಾಯಕ ಪಟ್ಟ: ದುಲೀಪ್ ಟ್ರೋಫಿಗೆ ಇಶಾನ್ ಕಿಶನ್ ನಾಯಕ

ನವದೆಹಲಿ.ಜು೨೯: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, ೧೫ ವರ್ಷದ ವೈಭವ್ ಸೂರ್ಯವಂಶಿ ಅವರ ಪ್ರತಿಭೆಗೆ ಮತ್ತೊಂದು ಗೌರವ ಸಿಕ್ಕಿದೆ. ೨೦೨೬-೨೭ರ ಸಾಲಿನ ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಗೆ ಈಸ್ಟ್ ಝೋನ್ ತಂಡದ ಉಪನಾಯಕನಾಗಿ ವೈಭವ್ ನೇಮಕಗೊಂಡಿದ್ದಾರೆ.

ವಿಕೇಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ತಂಡವನ್ನು ಮುನ್ನಡೆಸಲಿದ್ದು, ಜಿಂಬಾಬ್ವೆ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಬಿಹಾರದ ಯುವ ಆಟಗಾರ ವೈಭವ್‌ಗೆ ಉಪನಾಯಕತ್ವದ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಸಹ ಈಸ್ಟ್ ಝೋನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಐಸಿಸಿ ಟಿ೨೦ ಶ್ರೇಯಾಂಕದಲ್ಲಿ ೨೩೦ ಸ್ಥಾನಗಳ ಬೃಹತ್ ಜಿಗಿತ ಕಂಡಿದ್ದ ವೈಭವ್ ಸೂರ್ಯವಂಶಿ, ದೇಶೀಯ ಕ್ರಿಕೆಟ್‌ನಲ್ಲಿ ತೋರುತ್ತಿರುವ ಸತತ ಸ್ಥಿರ ಪ್ರದರ್ಶನಕ್ಕೆ ಆಯ್ಕೆ ಸಮಿತಿ ನೀಡಿದ ಗೌರವ ಇದಾಗಿದೆ.