Home ಜಿಲ್ಲೆ ವಕೀಲರ ಸಂಘದ ಚುನಾವಣೆನಾಳೆ ನಾಮ ಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನ

ವಕೀಲರ ಸಂಘದ ಚುನಾವಣೆನಾಳೆ ನಾಮ ಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನ


(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ನ.22; ಇಲ್ಲಿನ ಬಳ್ಳಾರಿ ವಕೀಲರ ಸಂಘದ 2026-28ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳ 5 ಮತ್ತು ಕಾರ್ಯಕಾರಿ ಸದಸ್ಯರ 12 ಸ್ಥಾನಗಳಿಗೆ ಬರುವ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು.
ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದ್ದು. ವಿವಿಧ ಪದಾಧಿಕಾರಿಗಳ ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಕೃಷ್ಣ ಅವರು ಪ್ರಕಟಿಸಿದ್ದಾರೆ. ನಾಮಪತ್ರಗಳನ್ನು ನ.23 ರಂದು ಅಂದರೆ ನಾಳೆ ನಾಮಪತ್ರಗಳನ್ನು ಹಿಂಪಡೆಯುವ ದಿನವಾಗಿದೆ. ಅಗತ್ಯ ಬಿದ್ದರೆ ಅಗತ್ಯ ಬಿದ್ದರೆ ಡಿ.5 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗು 12 ಕಾರ್ಯಕಾರಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ಇದರಲ್ಲಿ ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗು 2 ಕಾರ್ಯಕಾರಿ ಸದಸ್ಯ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ: ಕಲ್ಕಂಬ ರವೀಂದ್ರನಾಥ ಬಣಾಪುರ, ಚಂದ್ರಕಾAತ್ ಹೆಚ್. ಚಂದ್ರಶೇಖರ್ ಪಶ್ಚಾಪುರ್
ಉಪಾಧ್ಯಕ್ಷ ಸ್ಥಾನಕ್ಕೆ: ಪುರುಷೋತ್ತಮ ಬಿ., ಎಚ್.ಮಲ್ಲಿಕಾರ್ಜುನ, ವೆಂಕಟೇಶ್ ಡಿ ಯಾದವ್, ಟಿ.ರುದ್ರಮುನಿ.
ಕಾರ್ಯದರ್ಶಿ ಸ್ಥಾನಕ್ಕೆ: ರಾಮಣ್ಣ ಕೆ., ಮಲ್ಲಿಕಾರ್ಜುನ ಜಿ., ನೂರ್ ಮೊಹಮ್ಮದ್, ರೋಷನ್ ಬಾಷಾ ಡಿ.,
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ: ಅನುರಾಧಾ ಹೆಚ್.ಎನ್., ಕೆ. ಶಾಮಲಾ ಯಾದವ್ಖ
ಜಾಂಚಿ ಸ್ಥಾನಕ್ಕೆ: ಸಿ. ಕವಿತಾ,ಸಾಧನಾ ಹಿರೇಮಠ, ಗಡ್ಡೆ ಉಷಾ, ಕೆ.ಶ್ಯಾಮಲಾ ಯಾದವ್ ನಮಪತ್ರ ಸಲ್ಲಿಸಿದ್ದಾರೆ.
ಇನ್ನು ಕಾರ್ಯಕಾರಿ ಸಮಿತಿಯ ಎರೆಡು ಮಹಿಳಾ ಸ್ಥಾನಗಳಿಗೆ: ಮೂವರ ಸಿ. ವನಜಾ, ಶ್ರುತಿ ಡಿ., ಜೆ.ಎಂ. ಜಬೀನ್ ಬಸ್ರಿ ನಾಮಪತ್ರ ಸಲ್ಲಿಸಿದ್ದು.10 ಸಾಮಾನ್ಯ ಸ್ಥಾನಗಳಿಗೆ 19 ಜನ ಅಭ್ಯರ್ಥಿಗಳಾದ ಚಂದ್ರಪ್ಪ ಡಿ, ಲಿಂಗಪ್ಪ ಎನ್. ಬಿ. ವೀರೇಂದ್ರ ಹೆಚ್.ಎಂ,, ಎಸ್.ಸತ್ತಾರ್, ಗೋವಿಂದಯ್ಯ ಡಿ, ಅಜೀಜ್ ಸಾಬ್ ಕೆ, ವೀರೇಂದ್ರ ಪಾಟೀಲ್ ಎಸ್, ಎಂ. ನರಸಿಂಹ ರೆಡ್ಡಿ, ಮಂಜು ನಾಯಕ್ ವಿ., ವಿ. ನಾಗರಾಜ, ಎ. ಸತ್ತಾರ್ ಬಾಷಾ, ಕೆ. ವೆಂಕಟೇಶ್, ಬೆಲ್ದೋನಾ ಗೋಪಿನಾಥ್, ಶಿವಕುಮಾರ್ ಎಸ್.ಎಚ್., ಜಿ. ತಿಪ್ಪೇಸ್ವಾಮಿ, ಪವನ್ ಕುಮಾರ್ ಎಂ, ಬಸವರಾಜ ಪಾಟೀಲ್,ನಾಗರಾಜ ಎ., ಮಲ್ಲಿಕಾರ್ಜುನ ಆರ್ ನಾಮಪತ್ರ ಸಲ್ಲಿಸಿದ್ದಾರೆ.