Home ಜಿಲ್ಲೆ ವನ್ಯಜೀವಿಗಳು ಪ್ರಕೃತಿಯ ಅಮೂಲ್ಯ ಸಂಪತ್ತು

ವನ್ಯಜೀವಿಗಳು ಪ್ರಕೃತಿಯ ಅಮೂಲ್ಯ ಸಂಪತ್ತು

ಚನ್ನಮ್ಮನ ಕಿತ್ತೂರ,ಅ ೮: ಆಧುನಿಕತೆ ಹಾಗೂ ಜಾಗತೀಕರಣದಿಂದಾಗಿ ಪರಿಸರಕ್ಕೆ ಮಾರಕವಾಗಿ ಜೀವ ಸಂಕುಲ ಅಳಿವಿನ ಅಂಚಿಗೆ ತಲುಪಿದೆ, ಇಂದು ಪ್ರತಿನಿತ್ಯ ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡುತ್ತಿರುವುದರಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಮೊಹಮ್ಮದಲಿ ನಾಯಕ ಅಭಿಪ್ರಾಯಪಟ್ಟರು.


ಕಲ್ಮಠ ಕಿನಾವಿವ ಸಂಘದ ಕಾಲೇಜು ಆವರಣದಲ್ಲಿ ೭೨ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡಿದರು. ನಾವು ಅರಣ್ಯಗಳನ್ನು ಕಾಪಾಡಬೇಕು, ಪ್ರಾಣಿಗಳನ್ನು ಬೇಟೆಯಾಡುವುದನ್ನು ತಡೆಯಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಪರಿಸರವನ್ನು ಸ್ವಚ್ಛವಾಗಿಡಬೇಕು. ವನ್ಯಜೀವಿಗಳನ್ನು ಕೇವಲ ಪ್ರಾಣಿಗಳೆಂದು ನೋಡದೆ, ಪ್ರಕೃತಿಯ ಅಮೂಲ್ಯ ಸಂಪತ್ತು ಎಂದು ಪರಿಗಣಿಸಬೇಕು ಎಂದರು.


ಸಂಘದ ಚೇರಮನ್ ಶಂಕರ (ಬಾಬು) ಒಳಸಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ವೈಸ್‌ಚೇರಮನ್ನ ಜಗದೀಶ ಘಟ್ನಟ್ಟಿ, ಹಿರಿಯ ನ್ಯಾಯವಾದಿ ವಿಶ್ವನಾಥ ಬಿಕ್ಕಣ್ಣವರ, ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ, ಪ್ರೋಬೇಷನರಿ ಎಸಿಎಫ್ ಚೇತನಾ ಕಿರಣಕುಮಾರ, ವಲಯ ಅರಣ್ಯ ಅಧಿಕಾರಿ ಪ್ರಸನ್ ಬೆಲ್ಲದ, ಉಪವಲಯ ಅರಣ್ಯ ಅಧಿಖಾರಿ ಸಿದ್ದಪ್ಪ ಕೋತ, ಬಿಟ್ ಪಾರೆಸ್ಟ ಜಕ್ಕಪ್ಪನವರ, ಅಮೀನಸಾಬ ಗುಜರಾತ, ನವೀನ ಮಹೇಂದ್ರಕರ, ನ್ಯಾಯವಾದಿ ಮೋಹನ ಹಂಚಿನಮನಿ, ತಳವಾರ ಸೇರಿದಂತೆ ಸಂಘದ ಸರ್ವ ಸದಸ್ಯರು, ಕಾಲೇಜ ಹಾಗೂ ಅರಣ್ಯ ಸಿಬ್ಬಂದಿ, ವಿದ್ಯಾರ್ಥಿಗಳು ಇತರರಿದ್ದರು.