
ರಾಯಚೂರು:ನ.೨೩-ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ದಿ.೨೪ ರಿಂದ ೨೬ ವರೆಗೆ ಮೂರು ದಿನ ಉಜ್ಜಿಜೀವನ ಕೂಟ ಆಯೋಜಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಪ್ರಸಾದ್. ಎಮ್ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ
ಪ್ರತಿ ದಿನ ಸಂಜೆ ೬ ಗಂಟೆಯಿಂದ ಆಶೀರ್ವಾದ ಉಜ್ಜಿವನ ಕೂಟಗಳನ್ನು ನಡೆಯಲಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಕೂಟಕ್ಕೆ ಮುಖ್ಯ ಪ್ರಸಂಗಿಕರಾಗಿ ಪಾಸ್ಟರ್ ಎಸ್. ರಾಜಶೇಖರ್ ರವರು ಹಾಗೂ ಪಾಸ್ಟರ್ ಬಿ.ಜೆರೆಮೀಯಾ ಹೈದರಾಬಾದ ಆಗಮಿಸಲಿದ್ದಾರೆ. ಈ ಕೂಟಗಳಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಾಗೂ ವಿವಿಧ ಸಭೆಗಳ ಸಭಾಪಾಲಕರು ಸಭಿಕರು ಹಾಗೂ ನಗರ ಮತ್ತು ಗ್ರಾಮೀಣದ ವಿವಿಧ ಭಾಗಗಳಿಂದ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಪ್ರಸಾದ್ ಕುಮಾರ, ಮೂರ್ತಿ, ಡೇವಿಡ್ ರಾಜು, ವಿನೋದ ಕುಮಾರ, ದಿವಾಕರ್ ಸೇರಿದಂತೆ ಉಪಸ್ಥಿತರಿದ್ದರು.





















