
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು. ೧೫- ಚುನಾವಣೆಯಲ್ಲಿ ಹೇಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಅದೇ ರೀತಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರಿಂದ ಎನ್ಯುಮರೇಷನ್ ಫಾರಂ ಪಡೆದು ಬಿಎಲ್ ಓ ಗಳಿಗೆ ಸಲ್ಲಿಸಬೇಕು. ಇದರಲ್ಲಿ ವರುವ ೨೦ ವರ್ಷದ ಭವಿಷ್ಯ ಅಡಗಿದೆ. ಮೈಮರೆತರೆ ನಮಗೆ ನಷ್ಟ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಇಂದು ನಗರದಲ್ಲಿನ ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬರುವ ಎಂಎಲ್ ಸಿ ಚುನಾವಣೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಶಿಲ್ ಜಿ. ನಮೋಷಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಡಿ..ಕೆ.ಶಿವಕುಮಾರ್ ಅವರು ಜಲ ಸಂಪನ್ಮೂಲ ಸಚಿವರಾಗಿ ತುಂಗಭದ್ರ ಜಲಾಶಯದ ಗೇಟುಗಳನ್ನು ದುರಸ್ಥಿ ಮಾಡಲು ೨೪ ತಿಂಗಳು ತೆಗೆದುಕೊಂಡರು. ಆದರೆ ಅವರು ಸಿಎಂ ಆದ ೨೦ ತಾಸಿನಲ್ಲಿ ಬಿಡದಿ ಟೌಕ್ ಶಿಪ್ ಮಾಡಲು ನಿರ್ಧರಿಸಿದರು. ನಾನು ಅದಕ್ಕೆ ಹೇಳುವೆ ಮುಖ್ಯ ಮಂತ್ರಿಗಳಿಗೆ ನೀವು ರಿಯಲೆಸ್ಟೇಟ್ ಗೆ ತೋರುವ ಆಸಕ್ತಿಯನ್ನು ರೈತರ ಪರವಾಗಿ ತೋರಿಸಿ ಎಂದರು.
ರಾಜ್ಯದಲ್ಲಿ ಬರಗಾಲ ಬಂದಿದೆ. ಆ ಬಗ್ಗೆ ಅರಿತುಕೊಂಡು ಪರಿಹಾರ ಕಾರ್ಯ ಮಾಡಲು ಸಂಬಂಧಿಸಿದ ಕೃಷಿ ಖಾತೆಗೆ ಸಚಿವರಿಲ್ಲ. ಹೀಗಿದೆ ಈ ಸರ್ಕಾರ ರೈತ ಪರ ಎಂದು.
ರಾಹುಲ್ ಗಾಂಧಿ ಅವರು ಬಂದರೂ ಈ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ನಿರ್ಧಾರ ತೆಗಡದುಕೊಳ್ಳಲು ಅವರಿಗೆ ಮೂರು ದಿನ ಬಿಡುವಿಲ್ಲವಂತೆ ಎಂದು ವ್ಯಂಗವಾಡಿದರು.
ಮುಂಗಾರು ಅಧಿವೇಶನದ ನಂತರ ನಾನು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವೆ. ಬರುವ ಜಿಪಂ.ತಾಪಂ ಚುನಾವಣೆ ಎದುರಿಸಲು. ರೈತರ ಸಂಕಷ್ಟ ಕೇಳಲು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಎಸ್ ಐಆರ್ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ಅದನ್ನು ಸಂಪೂರ್ಣಗೊಳಿಸಲು ಮನವಿ ಮಾಡಿದರು.

































