
ಕೂಡ್ಲಿಗಿ. ಜು. 26 :- ಆಧುನಿಕ ಭರಾಟೆಯಲ್ಲಿ ಸಾಮಾಜಿಕ ಜಾಲತಾಣದ ಮೊಬೈಲ್ ಹಾವಳಿಯ ವಾಟ್ಸಾಪ್, ಫೇಸಬುಕ್, ಇನ್ಸ್ಟಾಗ್ರಾಮ್ ನಡುವೆ ಪುಸ್ತಕ ಓದುವ ಗೀಳು ಕಡಿಮೆಯಾಗಿದೆ ಇಂತಹ ಪ್ರಸ್ತುತ ದಿನಮಾನದಲ್ಲಿ ಕೃತಿ ರಚನೆ ಮಾಡಿ ಅದನ್ನು ಲೋಕಾರ್ಪಣೆ ಮಾಡುವುದು ಸುಲಭದ ಮಾತಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ – ವಿಜಯನಗರ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ ತಿಳಿಸಿದರು.
ಅವರು ಇಂದು ಮಧ್ಯಾಹ್ನ ತಾಲೂಕಿನ ಕಾನಾಹೊಸಹಳ್ಳಿಯ ಆಂಗ್ಲಮಾಧ್ಯಮ ವೈಭವ ಶಾಲೆಯ ಆವರಣದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಅನೇಕ ಸಾಹಿತ್ಯ ಆಸಕ್ತರು ಹೆಚ್ಚಾಗಿರುವ ಕಾನಾಹೊಸಹಳ್ಳಿ ಜನರ ಬಗ್ಗೆ ಕವನಸಂಕಲನದಲ್ಲಿ ಕೃತಿ ರಚನೆಕಾರ ಮಧುಸೂಧನ ರಚಿಸಿದ್ದಾರೆ. ಪ್ರಸ್ತುತ ದಿನಮಾನದಲ್ಲಿ ಜನಜೀವನ ಸುಖಕರವಿಲ್ಲ, ಜಂಜಾಟದ ಬದುಕಿನ ಜೀವನ, ಮೊಬೈಲ್ ಅಬ್ಬರದಲ್ಲಿ ಪುಸ್ತಕ ಬಿಡುಗಡೆ ಸುಲಭದ ಮಾತಲ್ಲ ಸಾಹಿತ್ಯ ಮೂಲಕ ಸುಮದುರ ಜೀವನಶೈಲಿಗಳ ಸಂಗ್ರಹವೇ ಕೃತಿ ಆಗಿದೆ.ಚುಕ್ಕಿ ಸಂಭ್ರಮ ಕವನ ಸಂಕಲನವು ಪ್ರೀತಿ- ಪ್ರೇಮ ಕುರಿತಾದ ಕವನ, ಹನಿಗವನಗಳ ಸಂಗ್ರಹವಿದೆ. ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳುವ ಬಗ್ಗೆ ತಿಳಿಸಿದರು. ಕವಿಯ ಸಾಲುಗಳು ಚುಟುಕಾಗಿ ಓದುಗರ ಮನಮುಟ್ಟುವಂತಿರಬೇಕು ಎಂದು ಕಿವಿಮಾತು ಹೇಳಿದರು.28 ನೇ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಬೇಕಿದ್ದು ಆದರೆ ಕಾರ್ಯಕ್ರಮಕ್ಕೆ ಕೆಲವಾರು ಕಾರಣಗಳಿಂದ ಕಾರ್ಯಕ್ರಮದ ತಯಾರಿಗೆ ಸ್ವಲ್ಪ ಹಿನ್ನೆಡೆಯಾಗಿದೆ ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯುವುದು ಖಂಡಿತ ಎಂದು ಈ ಸಂದರ್ಭದಲ್ಲಿ ನಿಷ್ಠಿರುದ್ರಪ್ಪ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ದಾವಣಗೆರೆ ವಿ ವಿ ಸಿಂಡಿಕೇಟ್ ಸದಸ್ಯರು ಹಾಗೂ ಪಟ್ಟಸಾಲೆ ಸಮುದಾಯದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಕವಿ ಮಧುಸೂದನ್ ರಚನೆಯ ಲೆಟರ್ ಎನ್ನುವ ಕವನ ಬಹಳಷ್ಟು ಅದ್ಬುತ ಕಲ್ಪನೆಯಿಂದ ಕೂಡಿದೆ ಬಡತನವೆಂದರೆ ಎನ್ನುವ ಇನ್ನೊಂದು ಕವನ ಕಷ್ಟಕೋಟೆಗಳ ಮೆಟ್ಟಿ ನಿಂತು ಜೀವನ ಗೆಲ್ಲುವ ಪರಿ ಬಗ್ಗೆ ತಿಳಿಸುತ್ತದೆ. ಒಬ್ಬ ಕವಿಗೆ ಬೇಕಾದದ್ದು ಉತ್ತಮ ಪರಿಸರವಾಗಿದೆ ಇದರಂತೆ ಅನೇಕ ಜೀವನ ಶೈಲಿಯ ಬರವಣಿಗೆಯ ಚುಕ್ಕಿ ಸಂಭ್ರಮ ಕವನ ಸಂಕಲನ ಬದುಕಿನ ಚುಕ್ಕಿಗೆ ಹತ್ತಿರವಾಗಿದೆ. ಇದು ಬರೀ ಪುಸ್ತಕವಲ್ಲ ಬದುಕಿನ ಭಂಡಾರವಾಗಿದೆ. ಕರ್ತವ್ಯದ ಒತ್ತಡದ ಬದುಕಿನ ನಡುವೆ ಉತ್ತಮ ಪುಸ್ತಕ ರಚನೆಯ ಚುಕ್ಕಿ ಸಂಭ್ರಮ ಲೋಕಾರ್ಪಣೆಯಾಗಿದೆ ಎಂದು ತಿಳಿಸಿದರು.
ಕೃತಿ ಕುರಿತು ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿ ಮಗಳ ಪ್ರೀತಿಯಲ್ಲಿ ಹುಟ್ಟಿದ ಕವಿತೆ ಚುಕ್ಕಿ ಸಂಭ್ರಮಕ್ಕೆ ಪುಸ್ತಕದ ರಚನೆಗೆ ಕಾರಣವಾಗಿದೆ. ಗದ್ಯ, ಪದ್ಯ ಗಪದ್ಯ ಈ ಪುಸ್ತಕದ ರಚನೆಯಲ್ಲಿದೆ ಕವನಗಳನ್ನು ಓದುವ ಮೂಲಕ ಜನರ ಮನಸ್ಸು ಮುಟ್ಟುವಂತಿವೆ ಚಿಕ್ಕದಾದ ಹನಿಗವನಗಳು ಸಹ ಅರ್ಥಪೂರ್ಣ ಹಾಗೂ ಪ್ರಸ್ತುತ ದಿನಮಾನಕ್ಕೆ ಹತ್ತಿರವಾಗಿದೆ ಎಂದು ತಿಳಿಸಿದರು.ಪ್ರಾಸ ಹಾಗೂ ತ್ರಾಸ ಕವಿತೆಗೆ ಮುಖ್ಯವಲ್ಲ ಇದನ್ನು ಮೀರಿದ ಕವನಗಳು ಮಧುಸೂದನ ಅವರ ಕವನಗಳಲ್ಲಿ ಮುಂದಿನ ದಿನಗಳಲ್ಲಿ ಬರಲಿ ಎಂದು ತಿಳಿಸಿದರು.
ಕೃತಿ ರಚನಾಕಾರರಾದ ಹಗರಿಬೊಮ್ಮನಹಳ್ಳಿ ಅರಣ್ಯದ ಉಪ ವಲಯ ಆರಣ್ಯಾಧಿಕಾರಿ ಪ್ರಾಸ್ತವಿಕವಾಗಿ ಮಾತನಾಡಿ ಮಧುಸೂದನ್ ಮಾತನಾಡಿ ಸಾಕ್ಷಿ ಎನ್ನುವ ಎರಡನೇ ತರಗತಿ ವಿದ್ಯಾರ್ಥಿನಿ ರಚಿಸಿದ ಬುಕ್ ನೋಡಿ ಮಾದರಿಯಾದ ನಾನು ಒಂದು ಕವನ ಸಂಕಲನದ ಪುಸ್ತಕ ತಯಾರು ಮಾಡಿದೆ. ರವಿಕುಮಾರ್ ಹಾಗೂ ಇತರರ ಸಾಹಿತಿಗಳು ಪುಸ್ತಕ ಬಿಡುಗಡೆ ಹಂತಕ್ಕೆ ಬರಲು ಎಲ್ಲರ ಸಹಕಾರ ಇದೆ. ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಲು ಎಲ್ಲರೂ ಬೆನ್ನು ತಟ್ಟಿದ್ದಾರೆ. ಕವನ ಹನಿಗವನಗಳನ್ನು ಸಂಗ್ರಹವಾಗಿರುವ ಕವನ ಸಂಕಲನ ಇದಾಗಿದೆ, ಸಾಹಿತ್ಯದಿಂದ ಪ್ರೇರಣೆ, ಸಮಾಧಾನ ಇದೆ, ಸಮಾಜದ ಬದಲಾವಣೆಗೆ ಬಸವಣ್ಣ ಸೇರಿದಂತೆ ಅನೇಕ ವಚನಗಳು ,ಪಕ್ಕದ ಅಂದ್ರಪ್ರದೇಶದ ಗದ್ದರ್ ಅವರ ಕ್ರಾಂತಿಗೀತೆಗಳು ಸಾಕ್ಷಿಯಾಗಿವೆ ಸಾಹಿತ್ಯಕ್ಕೆ ಸಮಾಜ ಬದಲಾವಣೆ ಉತ್ತಮ ಮಾರ್ಗವಾಗಿ ಕೊಂಡೋಯುವ ಶಕ್ತಿ ಇದೆ.ತಮ್ಮ ಜೀವನದಲ್ಲಿ ಕಂಡುಂಡ ಕೆಲವು ಘಟನೆಗಳನ್ನು ಕವನ ಸಂಕಲನ ವಾಗಿ ಹೊರಬಂದಿದೆ.
ಕಾರ್ಯಕ್ರಮದಲ್ಲಿ ಐಮಡಿ ಶರಣಾರ್ಯರು ಸಾನಿಧ್ಯವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಕೆ ಎಂ ರವಿಕುಮಾರ್, ತಾ ಪಂ ಮಾಜಿ ಸದಸ್ಯ ನಾಗೇಂದ್ರಪ್ಪ, ಸಾಹಿತಿ ಜಗನ್ನಾಥ, ಸಾಹಿತಿ ಜಗನ್ನಾಥ ಇತರರು ಮಾತನಾಡಿದರು.
ಆಂಗ್ಲ ಮಾಧ್ಯಮ ವೈಭವ ಶಾಲೆಯ ಮುಖ್ಯಗುರುಗಳಾದ ಪ್ರಕಾಶಗೌಡ, ಡಾ ಕರಿಬಸಪ್ಪ, ಡಾ ಓಂಕಾರಪ್ಪ,ತಿಪ್ಪೀರಮ್ಮ, ಚುಟುಕು ಸಾಹಿತಿ ಯು ನಾಗೇಶ,ಶರಣಪ್ಪ, ಶರಣನಗೌಡ, ಉಜ್ಜಿನಿ ಭೀಮಣ್ಣ, ಆನಂದಪ್ಪ ನಾಗೇಶ ಎನ್ ಟಿ, ಸಾಹಿತಿ, ಸಿದ್ದಲಿಂಗಮೂರ್ತಿ, ಸುನೀಲ್ ಕುಮಾರ, ಆಲೂರು ಲೋಕೇಶ, ಸುರೇಶ, ಇಂಜಿನಿಯರ್ ಸಚಿನ್, ಕೆ ನಾಗರಾಜ ಶಿಕ್ಷಕರು, ಶಿಕ್ಷಕಿ ಶಾರದಮ್ಮ, ಮಂಜಣ್ಣ ಶಿಕ್ಷಕರು, ಇಂದು ಕಾಲೇಜಿನ ಜಾತಪ್ಪ, ಮಹಾಂತೇಶ್, ವಾರ್ಡನ್ ಸುಮಾ, ಯು ಜಿ ತಿಪ್ಪೇಶ, ದಯಾನಂದ ಸಜ್ಜನ ಪೊಲೀಸ್ ವಿಜಯಕುಮಾರ್, ಜನಾರ್ದನ, ಹಾಗೂ ಇತರರು ಭಾಗವಹಿಸಿದ್ದರು.ಶಿಕ್ಷಕ ನಾಗರಾಜ ಸ್ವಾಗತಿಸಿದರು, ಕೊಟ್ರೇಶ ನಿರೂಪಿಸಿದರು.






























