Home ಜಿಲ್ಲೆ ಕಲಬುರಗಿ ಲೈಫ್ ಸರ್ಟಿಫಿಕೇಟ್ ಸ್ವಯಂ ಸಾಧನೆಯಿಂದಷ್ಟೇ ಸಾಧ್ಯ

ಲೈಫ್ ಸರ್ಟಿಫಿಕೇಟ್ ಸ್ವಯಂ ಸಾಧನೆಯಿಂದಷ್ಟೇ ಸಾಧ್ಯ

ಕಲಬುರಗಿ,ಜು.26: ಸಮಾಜದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆಯಬಹುದು. ಆದರೆ ಬದುಕಿಗೆ ಸಾರ್ಥಕತೆ ನೀಡುವ ಲೈಫ್ ಸರ್ಟಿಫಿಕೇಟ್ ಕೊಡುವ ಯಾವುದೇ ಕೇಂದ್ರಗಳು ಈ ಜಗತ್ತಿನಲ್ಲಿಲ್ಲ. ಅದನ್ನು ಪ್ರತಿಯೊಬ್ಬರೂ ತಮ್ಮ ಸ್ವಯಂ ಸಾಧನೆಯಿಂದಲೇ ಪಡೆದುಕೊಳ್ಳಬೇಕು”, ಇದು ಶರಣರ, ಸಂತ-ಮಹಾಂತರ ಹಾಗು ದಾರ್ಶನಿಕರಾದ ನ್ಯಾಯಮೂರ್ತಿಗಳ ಅನುಭವಗಳ ಮಾರ್ಗದಿಂದ ಸಾಧ್ಯ ಎಂದು ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಮಹಾಂತ ಸ್ವಾಮಿಗಳು ಮುದ್ಗಲ್ ಅವರು ಹೇಳಿದರು.
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ ರಾಯಚೂರು, ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಪ್ರೌಢ ಶಾಲೆಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ “ಮುಂಜಾವಿಗೊಂದು ನುಡಿ ಕಿರಣಗಳ ದರ್ಶನ ಎಂಬ 9 ದಿನಗಳ ವಿಶೇಷ ಪ್ರವಚನ ಮಾಲಿಕೆಯ ದ್ವೀತಿಯ ದಿನದಂದು ಅವರು ಆಶೀರ್ವಚನ ನೀಡಿದರು.
ಮುಂದುವರಿದು ಮಾತನಾಡಿದ ಶ್ರೀಗಳು, ಸೂರ್ಯನ ಆಗಮನದಿಂದ ಉತ್ತಮ ಚಟುವಟಿಕೆಗಳು ಪ್ರಾರಂಭ ಹೇಗೋ ಹಾಗೆ ನ್ಯಾಯಮೂರ್ತಿಗಳಾದ ಡಾ. ಶಿವರಾಜ್ ಪಾಟೀಲ ಅವರು ರಚಿಸಿದ ‘ನುಡಿ ಕಿರಣ’ ಪುಸ್ತಕದಲ್ಲಿನ ಮೌಲ್ಯಗಳು ನಮ್ಮ ಬದುಕನ್ನು ಬೆಳಗಿಸುವ, ಉಜ್ಜಲಗೊಳಿಸುವ ಹಾಗೂ ಆದರ್ಶವಾಗಿಸುವ ಅಪಾರ ಶಕ್ತಿಯನ್ನು ಹೊಂದಿವೆ. ದೇವಾಲಯಗಳ ಶಿಖರಗಳಿಗೆ ಹಣವಿದ್ದವರು ಬಂಗಾರದ ಕಳಸ ಕೊಡಿಸಬಹುದು ಆದರೆ ನಿಮ್ಮ ಶಿರ ಹೊನ್ನ ಕಳಸ ವಾಗುವುದು ಇಂಥ ಮಹಾತ್ಮರ ಹೊನ್ನಕಿರಣ ಗಳಿಂದ ಸನ್ಮಾರ್ಗದಲ್ಲಿ ಸಾಗಿ, ಸದ್ಗುಣಿ ಗಳಾದಾಗ ಮಾತ್ರ ಎಂದು ಬೋಧಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಪೆÇ್ರ. ಚನ್ನಾರೆಡ್ಡಿ ಪಾಟೀಲ್, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರೆಡ್ಡಿ ಪಾಟೀಲ್, ಪ್ರಾಂಶುಪಾಲ ಪ್ರಶಾಂತ್ ಕುಲಕರ್ಣಿ, ವಿನೂತಾ ಆರ್.ಬಿ., ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.