Home ಜಿಲ್ಲೆ ಕಲಬುರಗಿ ಚಂದ್ರಕಾಂತ ಹುಣಸಗಿ ಸೇರಿ ಐವರು ಪತ್ರಕರ್ತರಿಗೆ ಕಾಗಲಕರ್ ಪ್ರಶಸ್ತಿ

ಚಂದ್ರಕಾಂತ ಹುಣಸಗಿ ಸೇರಿ ಐವರು ಪತ್ರಕರ್ತರಿಗೆ ಕಾಗಲಕರ್ ಪ್ರಶಸ್ತಿ

ಕಲಬುರಗಿ,ಜು.26: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಜಿಲ್ಲಾ ಘಟಕ ಕೊಡ ಮಾಡುವ ವಿ.ಎನ್.ಕಾಗಲಕರ್ ಪ್ರಶಸ್ತಿಗೆ ಐವರು ಹಿರಿಯ ಪತ್ರಕರ್ತರು ಹಾಗೂ ವಾರ್ಷಿಕ ಪ್ರಶಸ್ತಿಗೆ 25 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಕುಮಾರ ಉದನೂರ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತರಾದ ಸಂಜೆವಾಣಿಯ ಚಂದ್ರಕಾಂತ ಹುಣಸಗಿ, ಪ್ರಭಾಕರ ಜೋಶಿ,ದೇವಿಂದ್ರಪ್ಪ ಅವಂಟಿ, ಪ್ರವೀಣರಡ್ಡಿ ಮತ್ತು ಚಂದ್ರಶೇಖರ ಕೌಲಗಾ ಅವರನ್ನು ವಿ.ಎನ್.ಕಾಗಲಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾರ್ಷಿಕ ಪ್ರಶಸ್ತಿ:
ಹಿರಿಯ ಪತ್ರಕರ್ತ ಸಂಗಮನಾಥ ರೇವತಗಾಂವ, ರಮೇಶ ಮೇಳಕಂದಾ, ಬಾಬುರಾವ ಕೋಬಾಳ, ಬ್ರಹ್ಮಾನಂದ ನಿಡಗುಂದಾ, ನಾಗರಾಜ ಗದ್ದಿ ಕಾಳಗಿ,ಮೋಯಿಜ್ ಪಟೇಲ್ ಚಿಂಚೋಳಿ, ಸೋಮೇಶಗೌಡ, ಶಿವಕುಮಾರ ಕುಸಾಳೆ, ಭೀಮಣ್ಣ ಬಾಲಯ್ಯ, ದತ್ತಾತ್ರೇಯ ಪಾಟೀಲ್, ಮಲ್ಲಿಕಾರ್ಜುನ ಜೋಗ, ಸಂತೋಷ ನಾಡಗೇರಿ, ಶರಣು ಪೂಜಾರಿ, ಸಂಗಮೇಶ ಹಿರೇಮಠ, ಶಿವಕುಮಾರ ಹಳ್ಳಿಖೇಡ, ಭೀಮಪ್ಪ, ಫಿರೋಜ್ ಅಹ್ಮದ್, ದಸ್ತಗೀರ ನದಾಫ್, ಸಾ.ಸಿ.ಬೆನಕನಳ್ಳಿ, ಶರಣು ಮಹಾಗಾಂವ, ವಿಜಯಕುಮಾರ ಜಿಡಗಿ, ಮಂಜುನಾಥ ದೊಡ್ಡಮನಿ, ಮಹ್ಮದ್ ಮಶಾಕ್ ಮತ್ತು ಪ್ರಕಾಶ ಜಂಗಲೆ ಮತ್ತು ಶರಣಬಸಪ್ಪ ಅನವರ್ ಹೀಗೆ ಒಟ್ಟು 25 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.


ನಾಳೆ ಪತ್ರಿಕಾ ದಿನಾಚರಣೆ
ನಾಳೆ ( ಜು.27) ಮಧ್ಯಾಹ್ನ 3:30ಗಂಟೆಗೆ ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಡಿಸಿ ಇಕ್ರಮ್ ಶರೀಫ್, ನಗರ ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ, ಎಸ್ಪಿ ಅಡೂರ್ ಶ್ರೀನಿವಾಸಲು ಆಗಮಿಸಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ದಲಗೆಟ್ಟಿ, ಮಾಧ್ಯಮ ಅಕಾಡಮಿ ಮಾಜಿ ಸದಸ್ಯ ದೇವೇಂದ್ರಪ್ಪ ಕಪನೂರ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.