Home ಜಿಲ್ಲೆ ದುಶ್ಚಟಗಳಿಂದ ದೂರವಿದ್ದಷ್ಟು ಉತ್ತಮ ಜೀವನ.

ದುಶ್ಚಟಗಳಿಂದ ದೂರವಿದ್ದಷ್ಟು ಉತ್ತಮ ಜೀವನ.

 ಸಿರಿಗೇರಿ ಜುಲೈ 26 ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ, ಡ್ರಗ್ಸ್ ಬೇಡ ಬ್ರೋ ಎನ್ನುವ ಯುವಕರಿಗಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಪೊಲೀಸ್ ಇಲಾಖೆಯ ಬಳ್ಳಾರಿ ಜಿಲ್ಲೆ ಎಸ್ಪಿ ಡಾ.ಸುಮನಾ ಪನ್ನೆಕರ್ ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, ಸಿರಿಗೇರಿ ಪೊಲೀಸ್ ಠಾಣೆ ಎಎಸ್ ಐ ಬಾಷ ಮತ್ತು ಹೆಡ್ ಕಾನ್ಸ್ಟೇಬಲ್ ಮಂಜುನಾಥ ರವರು ಮಾತನಾಡಿ, ಯುವಕರು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು, ಇದರಿಂದ ನಿಮ್ಮ ಜೀವನ ಉತ್ತಮವಾಗಿರಲು ಸಾಧ್ಯ. ಗುಟಕಾ, ತಂಬಾಕು, ಬೀಡಿ, ಸಿಗರೇಟ್, ಮದ್ಯಪಾನ, ಡ್ರಗ್ಸ್ ಸೇವನೆ ಈ ದುಶ್ಚಟಗಳು ಯುವಕರ ಜೀವನದಲ್ಲಿ ಬಹಳ ಕೆಟ್ಟ ಪರಿಣಾಮ ಬೀರಿ ಬದುಕು ಹಾಳು ಮಾಡುತ್ತವೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಇದ್ದೂ ಸತ್ತಂತೆ ಎಂಬ ಪರಿಸ್ಥಿತಿ ತರುತ್ತವೆ. ಮುಖ್ಯವಾಗಿ ವಿದ್ಯಾರ್ಥಿಗಳು ಈ ಡ್ರಗ್ಸ್ಗಳಿಂದ ದೂರವಿದ್ದು ಓದಿನಲ್ಲಿ ಶ್ರದ್ಧೆಯಿಟ್ಟು ಉತ್ತಮ ಸಾಧನೆಯನ್ನು ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರು ವೆಂಕಟೇಶ್ ಮತ್ತು ಸಹಸಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಫೋಟೋ. ಸಿರಿಗೇರಿಯಲ್ಲಿ ನಡೆದ ಡ್ರಗ್ಸ್ ಜಾಗೃತಿ ಕಾರ್ಯಕ್ರಮ.