ಕಲಬುರಗಿ: ಜಿಲ್ಲಾ ಮಾಜಿ ಸೈನಿಕರ ಅಭಿವೃದ್ಧಿ ಸಂಘದಿಂದ 27 ನೇ ಕಾರ್ಗಿಲ್ ವಿಜಯದಿವಸ ಆಚರಣೆ ಅಂಗವಾಗಿ ನಗರದ ಹುಮನಾಬಾದ್ ಬೇಸ್ ಹತ್ತಿರದ ನೇತಾಜಿ ವೃತ್ತದಿಂದ ಜಗತ್ ವೃತ್ತದವರೆಗೆ ಭವ್ಯ ಮೆರವಣಿಗೆ ಜರುಗಿತು. ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ ಗೊಳೆದ,ಬಸವರಾಜ ಬಿರಾದಾರ,ಅರ್ಜುನ ಕೆಂಗಲಿ,ನಾಗಣ್ಣ ಪಾಟೀಲ,ಶಿವಪುತ್ರಪ್ಪ ಓಕಳಿ ಸೇರಿದಂತೆ ಎನ್‍ಸಿಸಿ ಕೆಡೆಟ್‍ಗಳು, ಮಹಿಳೆಯರು, ಯುವಕರು ಪಾಲ್ಗೊಂಡರು.