
.ಸಿರಿಗೇರಿ.ಜು.26. ಈ ವರ್ಷ ಮುಂಗಾರು ಮಳೆ ಮುನಿಸಿನಿಂದಾಗಿ ಗ್ರಾಮೀಣ ಭಾಗದ ರೈತಾಪಿ ವರ್ಗದಲ್ಲಿ ಆತಂಕ ಹೆಚ್ಚು ಮಾಡಿದೆ. ಪರಿಣಾಮ ಗ್ರಾಮೀಣ ಭಾಗದಲ್ಲಿ ಈಗಲೂ ಮಳೆರಾಯನಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೂ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಳೆರಾಯನ ದರ್ಶನವಾಗುತ್ತಿಲ್ಲ. ಅಳಿದು ಉಳಿದ ಬೆಳೆಗಳು ನೆಲಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತಾಪಿ ವರ್ಗದವರು ಕೈ ಚೆಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ಮಧ್ಯೆಯು ಆಶಾಭಾವನೆ ಹೊತ್ತ ರೈತಾಪಿ ವರ್ಗದ ಮಹಿಳೆಯರು ಮಳೆರಾಯನಿಗೆ ಪ್ರಾರ್ಥಿಸಿ, ವಿಶೇಷ ಪೂಜೆ ನಡೆಸುತ್ತಿದ್ದಾರೆ. ಸಿರುಗುಪ್ಪ ತಾಲೂಕು ಸಿರಿಗೆರೆ ಗ್ರಾಮದಲ್ಲಿ ಇಂದು ಹಳ್ಳಿಮರದ ಓಣಿ, ಗುಡಟ್ಟಿಯವರ ಓಣಿ, ಬಿಚ್ಚುಗತ್ತಿಯವರ ಓಣಿ, ತಾತನಕಟ್ಟೆ ಪ್ರದೇಶದ ಓಣಿ ಮಹಿಳೆಯರಿಂದ. ತುಂಬಿದ ಬಿಂದಿಗೆಯಲ್ಲಿ ಪತ್ರಿ ಇಟ್ಟು, ಮಳೆರಾಯನನ್ನು ಪ್ರಾರ್ಥಿಸುವ ಮತ್ತು ಪೋರಗುಡ್ಡದಲ್ಲಿ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧಾರ್ಮಿಕ ವಿಶೇಷ ಕಾರ್ಯಕ್ರಮದಲ್ಲಿ ಕಲ್ಗುಡಿ ಶಾಂತಮ್ಮ, ಬಡಕನಾಯಕರ ಮುದುಕಮ್ಮ, ಬಿಚ್ಚುಗತ್ತಿ ಶಾಂತಮ್ಮ, ಗುಡಟ್ಟಿ ಹನುಮಂತಮ್ಮ, ಹಳ್ಳಿಮರದ ಈರಮ್ಮ. ಚಾನಾಳ್ ಯಲ್ಲಮ್ಮ ಹಾಗೂ ಇತರೆ ಎಲ್ಲಾ ಮಹಿಳೆಯರು, ಚಿಕ್ಕ ಮಕ್ಕಳು ಭಾಗವಹಿಸಿ ಪೋರಾಗುಡ್ಡಕ್ಕೆ ಹೋಗಿ ಮಳೆಗಾಗಿ ಪ್ರಾರ್ಥನೆ ಮಾಡಿದರು.
ಫೋಟೋ. ಮಳೆರಾಯನನ್ನು ಪ್ರಾರ್ಥಿಸಿದ ಮಹಿಳೆಯರು






























