Home ಜಿಲ್ಲೆ ಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ:

ಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ:


ಧಾರವಾಡ, ನ.೨೩:
ಸಮಾಜದ ಸುರಕ್ಷತೆಗಾಗಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಯಾವುದೇ ಸಮಯದಲ್ಲಿಯೂ ಸ್ಪಂದಿಸುವ ಪೊಲೀಸ್ ಇಲಾಖೆಯ ಸೇವಾ ಮನೋಭಾವ ಸಮಾಜದಲ್ಲಿ ವಿಶ್ವಾಸ ಮತ್ತು ಭದ್ರತೆಯ ಭಾವನೆ ಮೂಡಿಸುತ್ತದೆ ಎಂದು ಐ.ಎಫ್.ಎಸ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾ ಪೊಲೀಸ್ ಡಿಎಆರ್ ಕೇಂದ್ರ ಸ್ಥಾನದ ಕವಾಯತ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿದರು.
ಪ್ರತಿದಿನ ಸಮಾಜದ ಸುರಕ್ಷತೆಗಾಗಿ ಶ್ರಮಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂದು ಆರೋಗ್ಯ, ಸಂತೋ?À ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಗಾಗಿ ಕ್ರೀಡಾಂಗಣದಲ್ಲಿ ಸೇರಿದ್ದಾರೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವೆಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಪೊಲೀಸ್ ಇಲಾಖೆಯ ಕರ್ತವ್ಯ ಅತ್ಯಂತ ಜವಾಬ್ದಾರಿಯುತವಾದದ್ದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪೊಲೀಸ್ ಠಾಣೆಗೆ ಬಂದಾಗ ಅವರನ್ನು ಗೌರವದಿಂದ ಮಾತನಾಡಿಸಿ, ಅವರ ಕ?À್ಟಗಳನ್ನು ಆಲಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡುತ್ತಾರೆ. ಮಧ್ಯರಾತ್ರಿ, ಹಬ್ಬದ ದಿನ ಅಥವಾ ಕುಟುಂಬದೊAದಿಗೆ ಊಟ ಮಾಡುವ ಸಮಯದಲ್ಲಿಯೂ ತುರ್ತು ಕರೆ ಬಂದರೆ ತಕ್ಷಣ ಸ್ಪಂದಿಸಬೇಕಾಗುತ್ತದೆ. ಇಂತಹ ಕರ್ತವ್ಯ ನಿ?ೆ್ಠ ಮತ್ತು ತ್ಯಾಗದ ಮನೋಭಾವ ಪೊಲೀಸ್ ಇಲಾಖೆಯ ವಿಶೇ?Àತೆಯಾಗಿದೆ. ಇದರಿಂದ ಪ್ರತಿಯೊಬ್ಬ ನಾಗರಿಕನಿಗೂ ಪೊಲೀಸ್ ವ್ಯವಸ್ಥೆ, ಸರ್ಕಾರ ಹಾಗೂ ಸಂವಿಧಾನದ ಮೇಲೆ ವಿಶ್ವಾಸ ಮತ್ತು ಗೌರವ ಮೂಡುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಬಳಕೆ, ಸೈಬರ್ ಅಪರಾಧಗಳ ಪತ್ತೆ, ವಿಧಿವಿಜ್ಞಾನ ಹಾಗೂ ಇತ್ತೀಚಿನ ಆರ್ಥಿಕ ಅಪರಾಧಗಳ ತನಿಖೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಅಪಾಯದಲ್ಲಿರುವವರಿಗೆ ಧೈರ್ಯ ತುಂಬುವುದು, ಸಮಾಜಘಾತುಕ ಶಕ್ತಿಗಳು ಪ್ರಚೋದನೆ ನೀಡಿದ ಸಂದರ್ಭದಲ್ಲಿಯೂ ಸಂಯಮದಿAದ ವರ್ತಿಸುವುದು ಹಾಗೂ ಪ್ರತಿಯೊಬ್ಬರೊಂದಿಗೆ ಮಾನವೀಯತೆ ಮತ್ತು ಸೂಕ್ಷ್ಮತೆಯಿಂದ ನಡೆದುಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಯ ವಿಶೇ?Àತೆಯಾಗಿದೆ ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ದೈಹಿಕ ಸಾಮರ್ಥ್ಯ ಅತ್ಯಂತ ಅವಶ್ಯಕವಾಗಿದೆ. ಕ್ರೀಡೆ ಹಾಗೂ ದೈಹಿಕ ತರಬೇತಿಗಳಿಂದ ಶಿಸ್ತು, ಆತ್ಮವಿಶ್ವಾಸ ಮತ್ತು ಕರ್ತವ್ಯ ನಿರ್ವಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆಯುವ ದೈಹಿಕ ತರಬೇತಿಯನ್ನು ತಾವು ಖುದ್ದಾಗಿ ವೀಕ್ಷಿಸಿದ್ದು, ಅದರ ಅನುಭವವನ್ನೂ ಪಡೆದಿದ್ದೇನೆ. ಇಂತಹ ತರಬೇತಿಗಳಲ್ಲಿ ಬೆಳೆಸಿಕೊಳ್ಳುವ ಶಿಸ್ತು ಕರ್ತವ್ಯದಲ್ಲಿ ಆತ್ಮವಿಶ್ವಾಸವಾಗಿ ವ್ಯಕ್ತವಾಗುತ್ತದೆ ಎಂದು ಅವರು ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಟುಂಬದವರ ತ್ಯಾಗ ಹಾಗೂ ಸಹಕಾರವೂ ಅಭಿನಂದನಾರ್ಹವಾಗಿದೆ. ಯಾವುದೇ ಸಮಯದಲ್ಲಿ ಕರ್ತವ್ಯಕ್ಕೆ ಕರೆ ಬಂದರೂ ಕುಟುಂಬದ ಜವಾಬ್ದಾರಿಯನ್ನು ತಾವು ನಿಭಾಯಿಸುತ್ತೇವೆ ಎಂದು ಹೇಳಿ ಸಿಬ್ಬಂದಿಗಳನ್ನು ಸಮಾಜದ ರಕ್ಷಣೆಯ ಕಾರ್ಯಕ್ಕೆ ಕಳುಹಿಸಿಕೊಡುವವರು ಅವರ ಕುಟುಂಬದ ಸದಸ್ಯರು. ಪೊಲೀಸ್ ಸಿಬ್ಬಂದಿಗಳ ಉತ್ತಮ ಸೇವೆಯ ಹಿಂದೆ ಕುಟುಂಬದವರ ಬೆಂಬಲ ಮತ್ತು ತ್ಯಾಗವೂ ಅಡಗಿದೆ. ಆದ್ದರಿಂದ ಪೊಲೀಸ್ ಕುಟುಂಬದ ಎಲ್ಲ ಸದಸ್ಯರಿಗೂ ಗೌರವಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಅರಣ್ಯ ಅಧಿಕಾರಿಯಾಗಿ ಅರಣ್ಯ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಮಾನವ-ವನ್ಯಜೀವಿಗಳ ನಡುವಿನ ಸಂಘ?Àðದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರವನ್ನು ಸ್ಮರಿಸುತ್ತೇನೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊAದಿಗೆ ಪೊಲೀಸ್ ಇಲಾಖೆ ಸದಾ ಸಹಕಾರ ನೀಡುತ್ತಿದ್ದು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಎರಡೂ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಕ್ರೀಡೆ ಎಂದರೆ ಕೇವಲ ಗೆಲುವು ಅಥವಾ ಸೋಲಲ್ಲ. ಅದು ಸ್ಪೂರ್ತಿ, ಸಂಕಲ್ಪ ಮತ್ತು ಉತ್ತಮ ಆರೋಗ್ಯದ ಸಂಕೇತವಾಗಿದೆ. ಸಹೋದ್ಯೋಗಿಗಳೊಂದಿಗೆ ಆತ್ಮೀಯತೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಹಾಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಮತ್ತೊಮ್ಮೆ ಪ್ರಯತ್ನಿಸುವ ಉತ್ಸಾಹ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಬೇಕು. ಮೂರು ದಿನಗಳ ಈ ಕ್ರೀಡಾಕೂಟ ಸುರಕ್ಷಿತವಾಗಿ, ಉತ್ಸಾಹಭರಿತವಾಗಿ ಹಾಗೂ ಯಶಸ್ವಿಯಾಗಿ ನಡೆಯಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿ?Á್ಠಧಿಕಾರಿ ಗುಂಜನ್ ಆರ್ಯ ಅವರು ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ರಂಜಿತಾ ಆಲಗುಂಡಿ ಅವರು ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದರು. ಭದ್ರಾ ತಂಡದ ನಾಯಕ ಆರ್‌ಎಸ್‌ಐ ಗಿರೀಶ ಜುಂಜೂರಿ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕ ಪೊಲೀಸ್ ಕ್ರೀಡಾಕೂಟದ ಕವಾಯತಿನ ನೇತೃತ್ವವನ್ನು ಆರ್‌ಪಿಐ ಹಾಗೂ ಎಂಟಿಓ, ಡಿಎಆರ್‌ನ ಎಫ್.ಆರ್. ಡೊಕ್ಕಣ್ಣನವರ ಅವರು ನೇತೃತ್ವ ವಹಿಸಿದ್ದರು. ಕವಾಯತಿನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಪೊಲೀಸ್ ಬ್ಯಾಂಡ್ ಮಾಸ್ಟರ್ ನೇತೃತ್ವವನ್ನು ಎಆರ್‌ಎಸ್‌ಐ, ಡಿಎಆರ್‌ನ ವೈ.ಎಫ್. ಭಜಂತ್ರಿ ಅವರು ನೇತೃತ್ವ ವಹಿಸಿದ್ದರು. ಡಿಎಆರ್‌ನ ವೆಂಕಟೇಶ ದೊರೆ ಅವರು ಸ್ಟಿಕ್ ಮೇಜರ್ ಆಗಿ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಲಿಪಿಕ ಸಿಬ್ಬಂದಿ, ಹೋಮ್‌ಗಾರ್ಡ್ ಸಿಬ್ಬಂದಿ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.