
ಅಥಣಿ : ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿದೆ. ಕನ್ನಡಿಗರು ರಾಜ್ಯದ ಯಾವುದೇ ಭಾಗದಲ್ಲಿರಲಿ ಅಥವಾ ದೇಶ-ವಿದೇಶಗಳಲ್ಲಿ ನೆಲೆಸಿರಲಿ, ಕನ್ನಡ ಭಾಷೆಯ ಬಗ್ಗೆ ಗೌರವ, ಅಭಿಮಾನ ಹೊಂದುವುದರ ಜೊತೆಗೆ ಅದರ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಹಶೀಲ್ದಾರ್ ಸಿದರಾಯ ಬೋಸಗಿ ಕರೆ ನೀಡಿದರು.
ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ನಾಡದೇವಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಪೋಲೀಸ್ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದ್ದು, ಅನೇಕ ಮಹನೀಯರು ತಮ್ಮ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಚಿಂತನೆಗಳ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ್ದಾರೆ. ಇಂತಹ ಭಾಷೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು.
ಎಲ್ಲಾದರೂ ಇರು, ಎಂತಾದರೂ ಇರು ಎಂದೆAದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿ ಶ್ರಮಿಸಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಬೇಕು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಶರಣರು, ದಾಸರು ಹಾಗೂ ಸೂಫಿ ಸಂತರು ತಮ್ಮ ಸಾಹಿತ್ಯ, ವಚನಗಳು ಮತ್ತು ತತ್ವಪದಗಳ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ತಾಲೂಕಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶೇಷ ಗಮನ ಸೆಳೆದ ರೂಪಕಗಳು : ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡದ ವೈಭವವನ್ನು ಬಿಂಬಿಸುವ ಹಲವಾರು ರೂಪಕಗಳು ಗಮನ ಸೆಳೆದವು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿ ನೆರೆದಿದ್ದವರ ಕಣ್ಮನ ಸೆಳೆದವು.
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷ ಭುವನೇಶ್ವರಿ ಯಂಕAಚ್ಚಿ. ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಸೇರಿದಂತೆ ಪುರಸಭೆಯ ಸದಸ್ಯರಾದ ಸಂತೋಷ ಸಾವಡಕರ. ರಾಜು ಗುಡೋಡಗಿ. ಮಲ್ಲೇಶ ಹುದ್ದಾರ. ಪ್ರಮೋದ ಬಿಳ್ಳೂರ. ರಾವಸಾಬ ಐಹೊಳೆ. ವಿಲಿನರಾಜ ಯಳಮಲ್ಲೆ. ಮೃಣಾಲಿನಿ ದೇಶಪಾಂಡೆ. ವಿದ್ಯಾ ಐಹೊಳೆ. ರಾಮನಗೌಡ ಪಾಟೀಲ. ತಾಪಂ ಅಧಿಕಾರಿ ಶಿವಾನಂದ ಕಲ್ಲಾಪೂರ, ಡಿವೈಎಸ್ಪಿ ವೀರೇಂದ್ರಕುಮಾರ ಪಿ. ಡಾ. ಬಸಗೌಡ ಕಾಗೆ, ಪ್ರವೀಣ ಹುಣಸಿಕಟ್ಟಿ, ಎಮ್ ಆರ್ ಮುಂಜೆ, ಸಿಪಿಐ ಸಂತೋಷ ಹಳ್ಳೂರ, ಸಿಪಿಐ ಎಲ್ ಬಿ ಅಗ್ನಿ, ಮಹಾದೇವ ಬಿರಾದಾರ, ನಿಂಗಣ್ಣ ಬಿರಾದಾರ, ವೆಂಕಟೇಶ ಕುಲಕರ್ಣಿ. ಮಲ್ಲಿಕಾರ್ಜುನ ಮಗದುಮ್ಮ. ರಾಮಗೊಂಡ ಪಾಟೀಲ, ಕರವೇ ತಾಲೂಕಾ ಅಧ್ಯಕ್ಷ ಶಬ್ಬೀರ ಸಾತಬಚ್ಚೆ. ಅಣ್ಣಾಸಾಹೇಬ ತೆಲಸಂಗ್. ಉದಯ ಮಾಕಾಣಿ, ಕರವೇ ತಾಲೂಕಾ ಮಹಿಳಾ ಅಧ್ಯಕ್ಷೆ ಆರತಿ ಶಿವಶರಣ. ಮುಖಂಡರಾದ ಆಸೀಫ್ ತಾಂಬೋಳಿ. ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ:
ಕರವೇ ಗೌರವಾಧ್ಯಕ್ಷ ಸುಂದರ ಸೌದಾಗರ, ಪತ್ರಕರ್ತರಾದ ಪರಶುರಾಮ ನಂದೇಶ್ವರ, ಪ್ರಕಾಶ ಪೂಜಾರಿ, ಲಕ್ಷ್ಮಣ ಕೋಳಿ. ರಾಮಣ್ಣ ದೊಡ್ಡನಿಂಗಪ್ಪಗೋಳ. ಕೃಷಿಯಲ್ಲಿ ಮೈನೋದ್ದಿನ್ ಡೊಂಗರಗಾAವ. ನ್ಯಾಯವಾದಿ. ಡಿ ಬಿ ಠಕ್ಕಣ್ಣವರ ಸೇರಿದಂತೆ ಇನ್ನಿತರರಿಗೆ ತಾಲೂಕಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
























