Home ಜಿಲ್ಲೆ ಬೆಂಗಳೂರು ತಾಲೂಕು ವಕೀಲರ ಸಂಘದ ಚುನಾವಣೆ : ವಿನಯ್ ಕುಮಾರ್‌ಗೆ ಗೆಲುವು

ತಾಲೂಕು ವಕೀಲರ ಸಂಘದ ಚುನಾವಣೆ : ವಿನಯ್ ಕುಮಾರ್‌ಗೆ ಗೆಲುವು

ಮಾಲೂರು,ಅ.೬: ತೀವ್ರ ಕುತೂಹಲ ಕೆರಳಿಸಿದ್ದ ಮಾಲೂರು ತಾಲೂಕು ವಕೀಲರ ಸಂಘದ ೨೦೨೬-೨೮ನೇ ಅವಧಿಯ ಎರಡು ವರ್ಷಗಳ ಪದವಿಗಳಿಗಾಗಿ ನಡೆದ ಚುನಾವಣೆಯಲ್ಲಿ ವಿನಯ್ ಕುಮಾರ್ ಆರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.


ನಗರದ ಜೆಎಂಎಫ್ ಸಿ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಎಂ ಆರ್ ವಿನಯ್ ಕುಮಾರ್ ೧೭೪ ಮತಗಳನ್ನು ಪಡೆದು ಚುನಾಯಿತರಾದರೆ, ಡಿ ನಾರಾಯಣಸ್ವಾಮಿ ೭೩ ಮತಗಳನ್ನು ಪಡೆದು ಸೋತರು.


ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಗನ್ನಾಥ ಎಸ್ ಅವರು ೧೫೯ ಮತಗಳನ್ನು ಪಡೆದು ವಿಜೇತರಾದರೆ, ಬಿ ನಾರಾಯಣಸ್ವಾಮಿ ೯೬ ಮತಗಳನ್ನು ಪಡೆದು ಸೋತರು. ಕಾರ್ಯದರ್ಶಿ ಸ್ಥಾನಕ್ಕೆ ಎಚ್ ಎಲ್ ನಾಗರಾಜ್ ಅವರು ೧೪೮ ಮತಗಳನ್ನು ಪಡೆದು ಆಯ್ಕೆಯಾದರೆ, ಎಚ್ ಆರ್ ನಾರಾಯಣಸ್ವಾಮಿ ೯೬ ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.


ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಕೃಷ್ಣಪ್ಪ ೧೨೮ ಮತಗಳನ್ನು ಪಡೆದರೆ, ಕೆಸಿ ಮರಳಿ ಮೋಹನ್ ೧೦೫ ಮತಗಳನ್ನು ಪಡೆದು ಸೋಲನುಭವಿಸಿದರು. ಖಜಾಂಚಿ ಸ್ಥಾನಕ್ಕೆ ಭಾಗ್ಯಮ್ಮ ೧೩೯ ಮತಗಳನ್ನು ಪಡೆದು ಆಯ್ಕೆಯಾದರೆ, ಮಂಜುಳಾದೇವಿ ೮೩ ಮತಗಳನ್ನು ಪಡೆದು ಸೋತರು.


೨೪೭ ಮತದಾರರ ಪೈಕಿ ಒಟ್ಟು ೨೪೭ ಮತದಾರರು ಬೆಳಗ್ಗೆ ೮:೦೦ ಗಂಟೆಯಿಂದ ಮಧ್ಯಾಹ್ನ ೩:೦೦ ಗಂಟೆಯವರೆಗೆ ಮತಚಲಾವಣೆ ಮಾಡಿದರು. ಚುನಾವಣಾ ಅಧಿಕಾರಿಗಳಾಗಿ ಹಿರಿಯ ವಕೀಲರ ಸಮಿತಿ ಕಾರ್ಯನಿರ್ವಹಿಸಿತು.


ಫಲಿತಾಂಶ ಪ್ರಕಟಗೊಂಡಿದಂತೆ, ವಿನಯ್ ಕುಮಾರ್ ಅವರ ಅಭಿಮಾನಿಗಳು, ಹಿತೈಷಿಗಳು, ವಕೀಲರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಆರ್ ಸಿ ಅಪ್ಪಾಜಿ ಗೌಡ, ಸಿಎ ಅಶ್ವತ್ ನಾರಾಯಣ, ಎಚ್ವಿ ರಮೇಶ್, ಆರ್ ವಿ ನಾರಾಯಣ್ ಕುಮಾರ್, ರಾಮಾಂಜಿ, ರಾಜ್ ಕುಮಾರ್, ಆನಂದ್ ಕುಮಾರ್ ಹಾಗೂ ಇತರರು ಹಾಜರಿದ್ದರು.