
ಔರಾದ್ : ಸುಸಂಸ್ಕøತ ಸಮಾಜಕ್ಕೆ ಸ್ವಾಲಂಬನೆ ಜೀವನ ಅಗತ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರಮ ಮಹಾತ್ವದ್ದಾಗಿದೆ ಎಂದು ಪಿಎಸ್ಐ ರೇಣುಕಾ ಭಾಲೆಕಾರ್ ನುಡಿದರು.
ತಾಲ್ಲೂಕಿನ ಸಂತಪುರ ಭಾರತ್ ಕಲ್ಯಾಣ ಮಂಟಪದಲ್ಲಿ ರವಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ನೀಡುವ ಆರ್ಥಿಕ ನೆರವನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.
ಬೀದರ್ ಸ್ತ್ರೀ ರೋಗ ತಜ್ಞೆ ಡಾ. ರಾಮೇಶ್ವರಿ ಮಲಶೆಟ್ಟಿ ಅವರು ವಿಶೇಷ ಉಪನ್ಯಾಸ ನೀಡಿ ಮಹಿಳಾ ಸ್ವಾಸ್ತತೆ ಮತ್ತು ಸ್ತನ ಕ್ಯಾನ್ಸರ್ ತಡಗಟ್ಟುವಿಕೆ ಮತ್ತು ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾತನಾಡಿ, ಸ್ತನ ಕ್ಯಾನ್ಸರ್ ಬಗ್ಗೆ ಹೆಣ್ಣು ಮಕ್ಕಳು ಭಯ ಪಡುವ ಅಗತ್ಯವಿಲ್ಲ. ಗ್ರಾಮೀಣ ಭಾಗದ ಮಹಿಳೆಯರು ತನಗೆ ತೊಂದರೆ ಆದರೂ ಸಹ ಇನ್ನೊಬ್ಬರಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಾರೆ. ಇದರಿಂದ ರೋಗದ ಲಕ್ಷಣಗಳು ತೀವ್ರ ಸ್ವರೂಪ ಪಡೆದು ಸಮಸ್ಯೆ ಅನುಭವಿಸುವಂತೆ ಮಾಡುತ್ತದೆ. ನಿಯಮಿತ ವೈದ್ಯರ ಸಲಹೆ ಮತ್ತು ತಪಾಸಣೆ ಮೂಲಕ ಕ್ಯಾನ್ಸರ್ನ್ನು ಮೊದಲ ಹಂತದಲ್ಲಿಯೇ ಗುಣಪಡಿಸಬಹುದೆಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಮುರಳಿಧರ್ ಎಚ್ ಎಲ್ ಮಾತನಾಡಿ, ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಕುಟುಂಬ ನಿರ್ವಹಣೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಹಾಗೂ ವಿವಿಧ ವಿಭಾಗಗಳಲ್ಲಿ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿಯೆ ಯೋಜನೆಯ ಗುರಿಯಾಗಿದೆ ಎಂದರು.
ಈ ವೇಳೆ ಔರಾದ್ ಮತ್ತು ಕಮಲನಗರ ತಾಲೂಕಿನ ಹಲವಾರು ಗ್ರಾಮಗಳ ಸುಮಾರು 600ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದರು. ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಯೋಜನೆಯ ಸದುಪಯೋಗ ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಸ್ವಾವಲಂಭಿ ಜೀವನ ಸಾಗಿಸುತ್ತಿರುವ ಔರಾದ್ ಮತ್ತು ಕಮಲನಗರ ತಾಲೂಕಿನ 11 ಜನ ಮಹಿಳೆಯರನ್ನು ಶಾಲು ಹೋದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲರಿಗೂ ಕುಟ್ಟಿದ ಹುಗ್ಗಿ ಪಾಯಸ, ಭಜ್ಜಿ, ಖಡಕ್ ಬಿಳಿ ಜೋಳದ ರೊಟ್ಟಿ, ಅನ್ನ ಸಾಂಬಾರು, ಉಪ್ಪಿನಕಾಯಿ ಸೇರಿದಂತೆ ಇನ್ನಿತರ ಮೃಷ್ಠಾನ ಭೋಜನದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿ-ಕೇರ್ ಆಸ್ಪತ್ರೆ ವ್ಯವಸ್ಥಾಪಕ ವಿದ್ಯಾಸಾಗರ ಬಿರಾದರ್, ವಕೀಲೆ ಪ್ರಿಯಾಂಕಾ ಕೋಟೆ, ಮುಖ್ಯಗುರು ಸವಿತಾ ಪಾಟೀಲ, ಮಾಜಿ ಗ್ರಾಪಂ ಅಧ್ಯಕ್ಷೆ ರೇಣುಕಾ ಸಜ್ಜನಶೆಟ್ಟಿ, ಸಮಾಜ ಸೇವಕ ಧನರಾಜ ಮುಸ್ತಾಪುರ, ಜಿಲ್ಲಾ ಜನ ಜಾಗ್ರತಿ ಸದಸ್ಯೆ ಸಪನಾ ಖಂಡೆ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಂಗೀತಾ, ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ, ವಿಲಾಸ, ಶಿವಶರಣಪ್ಪ, ಮಹಾದೇವ, ಅನೀತಾ , ಗಾಯತ್ರಿ ಶಿವಕುಮಾರ ಇತರರಿದ್ದರು.





















