Home ಜಿಲ್ಲೆ ಕಲಬುರಗಿ ಹೈದರಾಬಾದ್ ವಿಮೋಚನೆಯ ಹರಿಕಾರ ಸ್ವಾಮಿ ರಾಮಾನಂದ ತೀರ್ಥರು

ಹೈದರಾಬಾದ್ ವಿಮೋಚನೆಯ ಹರಿಕಾರ ಸ್ವಾಮಿ ರಾಮಾನಂದ ತೀರ್ಥರು

ಕಲಬುರಗಿ: ಸ್ವಾಮಿ ರಾಮಾನಂದ ತೀರ್ಥರ ೧೨೩ನೇ ಜಯಂತಿಯನ್ನು ಸ್ವಾಮಿ ರಾಮಾನಂದ ತೀರ್ಥ ಮೆಮೊರಿಯಲ್ ಟ್ರಸ್ಟ್ ನ ವತಿಯಿಂದ ಇಂದು ಕಲಬುರಗಿಯಲ್ಲಿ ಆಚರಿಸಲಾಯಿತು.
ಸ್ವಾಮಿ ರಾಮಾನಂದ ತೀರ್ಥರ ಕುರಿತ ಆಂಗ್ಲ ಪುಸ್ತಕದ ಕನ್ನಡ ಅನುವಾದಕರಾದ ಡಾ. ಅಂಬುಜಾ ಮಳಖೇಡಕರ್ ಅವರು ಸ್ವಾಮಿ ರಾಮಾನಂದ ತೀರ್ಥರ ಜೀವನದ ರೋಚಕ ಘಟನೆಗಳ ಕುರಿತು ಮಾತನಾಡಿದರು.
ಟ್ರಸ್ಟ್ ನ ಉಪಾಧ್ಯಕ್ಷರಾದ ಮುದಗಲ್ ವೆಂಕಟೇಶ ಅವರು ಸ್ವಾಮೀಜಿಯ ಜೀವನದ ಸಂದೇಶಗಳನ್ನು ಪ್ರಚಾರಗೊಳಿಸುವ ಪ್ರಯತ್ನ ಆಗಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ ಸಿರನೂರಕರ್ ಅವರು ಮಾತನಾಡಿ ಕಲ್ಯಾಣ ಕರ್ನಾಟಕದ ಜನರು ಇಂದು ಉಸಿರಾಡುತ್ತಿರುವ ಸ್ವಾತಂತ್ರ‍್ಯದ ಗಾಳಿ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆ, ಅವರ ಜೀವನ, ಹೋರಾಟವನ್ನು ನಾವು ಸ್ಮರಿಸಬೇಕೆಂದು ತಿಳಿಸಿದರು. ಟ್ರಸ್ಟ್ ನ ಕಾರ್ಯದರ್ಶಿ ಸಂಜೀವ ಸಿರನೂರಕರ್ ಸ್ವಾಗತ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ನ ಖಜಾಂಚಿ ನಾರಾಯಣ ಜಹಾಗಿರದಾರ್, ಪ್ರಧಾನ ಸಂಯೋಜಕ ಶ್ರೀಪಾದ ಜೋಶಿ, ಲೇಖಕ ವಿನುತ ಜೋಶಿ, ವೆಂಕಟೇಶ ಕುಲಕರ್ಣಿ, ಅನಂತಾಚಾರ್ಯ ಬುರ್ಲಿ, ಪ್ರಾಣೇಶಾಚಾರ್ಯ ಬೈಚಬಾಳ, ಶಾಮಾಚಾರ್ಯ ಬೈಚಬಾಳ, ಶ್ಯಾಮರಾವ ಕುಲಕರ್ಣಿ, ರೇಖಾ ಸಿರನೂರಕರ್ ಮೊದಲಾದವರು ಉಪಸ್ಥಿತರಿದ್ದರು.