
ಕಲಬುರಗಿ: ಪರಿಶಿಷ್ಟ ಜಾತಿ ಒಳಮೀಸಲಾತಿ ಹಾಗೂ ರೋಸ್ಟರ್ ಪಾಯಿಂಟ್ ನಿಂದ ಕೆಟಗರಿ ಸಿ ಯ ಒಳಜಾತಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಬಂಜಾರಾ ಮಹಿಳಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.ಸಂಯೋಜಕರಾದ ಶಾರದಾ ಬಿ ಯಾಕಾಪುರ,ಪಾರ್ವತಿಬಾಯಿ,ಕಮಲಾಬಾಯಿ, ಬಾಬುರಾವ್ ಚವಾಣ್, ಸುನೀತಾ ಚವಾಣ್, ಶಶಿಕಲಾ ರಾಠೋಡ ಸೇರಿದಂತೆ ಹಲವರು ಪಾಲ್ಗೊಂಡರು.





















