Home ಜಿಲ್ಲೆ ಬೆಂಗಳೂರು ಗಾಂಧೀಜಿ,ಶಾಸ್ತ್ರೀಜಿ ಆದರ್ಶಗಳು ದೇಶದ ಪ್ರಜಾಪ್ರಭುತ್ವಕ್ಕೆ ದಾರಿದೀಪ

ಗಾಂಧೀಜಿ,ಶಾಸ್ತ್ರೀಜಿ ಆದರ್ಶಗಳು ದೇಶದ ಪ್ರಜಾಪ್ರಭುತ್ವಕ್ಕೆ ದಾರಿದೀಪ

ಕೋಲಾರ,ಅ.೪-ರಾಷ್ಟ್ರದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ದೇಶದ ಜನರ ಹಕ್ಕುಗಳ ರಕ್ಷಣೆಗೆ ಮಹಾತ್ಮ ಗಾಂಧೀಜಿ ನೀಡಿದ ಕೊಡುಗೆ ಅಪಾರವಾಗಿದೆ. ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣಬೇಕು, ಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ಗೌರವ ಮತ್ತು ಅವಕಾಶ ದೊರಕಬೇಕು ಎಂಬುದು ಅವರ ಉದಾರವಾದಿ ಚಿಂತನೆಯಾಗಿತ್ತು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.


ನಗರದ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ೧೫೭ನೇ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ೧೨೨ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಮಹಾತ್ಮಗಾಂಧೀಜಿ ಅವರು ಸತ್ಯ, ಆಹಿಂಸೆ ಮತ್ತು ಸಮಾನತೆ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ?ಯ ತಂದುಕೊಟ್ಟರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅರ್ಥಪೂರ್ಣವಾಗಲಿದೆ ಎಂದರು.


ಕಾಂಗ್ರೇಸ್ ಪಕ್ಷವು ಸ್ವಾತಂತ್ರ?ಯ ಪೂರ್ವದಲ್ಲಿ ಮಾತ್ರವಲ್ಲದೆ ಸ್ವಾತಂತ್ರ?ಯ ನಂತರವೂ ಸಹ ದೇಶದ ಅಭಿವೃದ್ದಿಗಾಗಿ ಹಲವು ಹೋರಾಟಗಳ ಮೂಲಕ ಅನೇಕ ನಾಯಕರ ಪರಿಶ್ರಮದಿಂದ ದೇಶದ ಅಭಿವೃದ್ದಿ ಪಡೆಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಗಾಂಧೀಜಿ ಅವರು ಅಹಿಂಸಾ ಮಾರ್ಗದ ಮೂಲಕ ದೇಶದ ಸ್ವಾತಂತ್ರ?ಯ ಚಳವಳಿಗೆ ಹೊಸ ದಿಕ್ಕು ತೋರಿದರು. ’ಸತ್ಯ, ’ಸಮಾನತೆ’, ’ಶಾಂತಿ’ ತತ್ವಗಳನ್ನು ಪಾಲಿಸುವಂತಾಗಬೇಕು ಎಂದರು.


ಕ್ವಿಟ್ ಇಂಡಿಯಾ ಸೇರಿದಂತೆ ಹಲವು ಸ್ವಾತಂತ್ರ?ಯ ಹೋರಾಟಗಳಲ್ಲಿ ಗಾಂಧೀಜೀ ಜೈಲು ಸೇರಿದ್ದರು. ಅವರ ಪ್ರಮಾಣಿಕತೆ ಮಾದರಿಯಾಗಿತ್ತು. ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಕೋಮುವಾದಿ ಆರ್.ಎಸ್.ಎಸ್. ಮುಖಂಡನಾಗಿದ್ದು, ಇಂದು ಬಿಜೆಪಿ ಪಕ್ಷದವರ ಆರಾಧ್ಯ ದೈವವಾಗಿದ್ದಾನೆಂದು ಟೀಕಿಸಿದರು.


ದೇಶದ ಜನತೆಯ ನಡುವೆ ಏಕತೆ ಮತ್ತು ಸಹಬಾಳ್ವೆ ಮೂಡಿಸುವುದು ಅತ್ಯಂತ ಅಗತ್ಯ. ಜಾತಿ, ಧರ್ಮ, ಭಾಷೆ ಸೇರಿದಂತೆ ಯಾವುದೇ ವಿಚಾರದಲ್ಲಿ ಜನರನ್ನು ವಿಭಜಿಸುವ ಬದಲು, ಎಲ್ಲರನ್ನೂ ಒಗ್ಗೂಡಿಸಿ ರಾಷ್ಟ್ರದ ಅಭಿವೃದ್ಧಿಗೆ ಮುನ್ನಡೆಸಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಅವರ ವಿಚಾರಧಾರಾ ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ತಿಳಿಸಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಧ್ವನಿಗೆ ಗೌರವ ನೀಡುವುದು ಅತ್ಯಂತ ಮುಖ್ಯ. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪರಸ್ಪರ ಸಹಕಾರದಿಂದ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸಂವಿಧಾನದ ಆಶಯಗಳನ್ನು ಗೌರವಿಸಿ, ಸಮಾನತೆ, ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ವಿವರಿಸಿದರು.


ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮ್ಯಾಕಲ್ ನಾರಾಯಣಸ್ವಾಮಿ, ಬೆಳಗನಹಳ್ಳಿ ಮುನಿವೆಂಕಟಪ್ಪ, ಅಂಬರೀಶ್, ಕುಡಾ ಅಧ್ಯಕ್ಷ ಮಹ್ಮದ್ ಹನೀಫ್, ಜಯದೇವ್ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಗ್ಯಾರೆಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಕೋಮುಲ್ ನಿರ್ದೇಶಕ ಷರೀಪ್, ಆಹಾರ ನಿಗಮದ ರಾಜ್ಯ ಉಪಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಕೆ.ಡಿ.ಪಿ. ನಿರ್ದೇಶಕ ರಾಜ್ ಕುಮಾರ್, ಮೈಲಾಂಡಹಳ್ಳಿ ಮುರಳಿ, ಅಪ್ಸರ್, ಗೋವಿಂದರಾಜು, ಸಂಗೀತಾ ಜಗದೀಶ್, ಷಫಿ, ಪ್ಯಾರಜಾನ್, ಕೋಟೆ ನವೀನ್, ರಾಜೇಶ್, ಅರೀಫ್, ನದೀಂ, ಮಹೇಶ್, ಬಾಲು ಮುಂತಾದವರು ಇದ್ದರು.


ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪುಷ್ಟನಮನಗಳನ್ನು ಸಲ್ಲಿಸಲಾಯಿತು.