
ಕಲಬುರಗಿ: ಕಲಬುರಗಿ ಸ್ಪೋಟ್ರ್ಸ್ ಹಬ್ಬ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಿಸಿಸಿ ಕ್ಲಬ್ (ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್) ತಂಡವು ಎನ್‍ವಿ ಜಿಮ್ಖಾನಾ ತಂಡವನ್ನು ಕೇವಲ 2 ರನ್‍ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.
ಕೆಬಿಎನ್ ಟರ್ಫ್ ಗ್ರೌಂಡ್, ಕಲಬುರಗಿಯಲ್ಲಿ ನಡೆದ 20 ಓವರ್‍ಗಳ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಸಿಸಿ ಕ್ಲಬ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.
ಜಿಸಿಸಿ ಪರ ವಿಜಯಕುಮಾರ್ ಎಚ್.ಆರ್. ಅವರು ಕೇವಲ 26 ಎಸೆತಗಳಲ್ಲಿ 63 ರನ್‍ಗಳನ್ನು ಅಜೇಯವಾಗಿ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು 3 ಬೌಂಡರಿ ಹಾಗೂ 7 ಸಿಕ್ಸರ್‍ಗಳನ್ನು ಸಿಡಿಸಿದರು. ಅಭಿಷೇಕ್ ಎಸ್.ಕೆ. 29 ಎಸೆತಗಳಲ್ಲಿ 41 ರನ್, ಸನ್ಮಯ್ ರುದ್ರವಾಡಿ 23 ಎಸೆತಗಳಲ್ಲಿ 33 ರನ್, ಮಾರುತಿ 20 ಎಸೆತಗಳಲ್ಲಿ 27 ರನ್, ಓಂಕಾರ್ ರಾಠೋಡ್ 9 ಎಸೆತಗಳಲ್ಲಿ 29 ರನ್ ಗಳಿಸಿದರು. ಆರಂಭಿಕ ಆಟಗಾರ ಕೆದಾರನಾಥ್ 10 ಎಸೆತಗಳಲ್ಲಿ 20 ರನ್‍ಗಳ ಕೊಡುಗೆ ನೀಡಿದರು.
226 ರನ್‍ಗಳ ಗುರಿ ಬೆನ್ನಟ್ಟಿದ ಎನ್‍ವಿ ಜಿಮ್ಖಾನಾ ತಂಡವು ಉತ್ತಮ ಹೋರಾಟ ನೀಡಿದರೂ, ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 224 ರನ್‍ಗಳಿಗೆ ಸೀಮಿತವಾಯಿತು. ಹೀಗಾಗಿ ಜಿಸಿಸಿ ಕ್ಲಬ್ 2 ರನ್‍ಗಳ ರೋಚಕ ಜಯ ಸಾಧಿಸಿತು.
ಎನ್‍ವಿ ಜಿಮ್ಖಾನಾ ಪರ ನಿತೇಶ್ ವಣಿಕ್ಯಾಳ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 51 ಎಸೆತಗಳಲ್ಲಿ 97 ರನ್ ಗಳಿಸಿದರು. ಅವರ ಇನ್ನಿಂಗ್ಸ್‍ನಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್‍ಗಳು ಸೇರಿದ್ದವು. ಆದರೆ ಕೇವಲ 3 ರನ್‍ಗಳ ಅಂತರದಲ್ಲಿ ಶತಕ ವಂಚಿತರಾದರು. ಅಸಿಫ್ ಸಾನ್ 11 ಎಸೆತಗಳಲ್ಲಿ ಅಜೇಯ 25 ರನ್, ವಸೀಮ್ ಬೈಗ್ 10 ಎಸೆತಗಳಲ್ಲಿ 22 ರನ್, ಸಯ್ಯದ್ ಫಯ್ಯಾಜುದ್ದೀನ್ ಖಾದ್ರಿ 15 ಎಸೆತಗಳಲ್ಲಿ 20 ರನ್ ಹಾಗೂ ಹರೀಶ್ ಜೆ.ಕೆ. 14 ಎಸೆತಗಳಲ್ಲಿ 19 ರನ್ ಗಳಿಸಿದರು.
ಜಿಸಿಸಿ ಬೌಲಿಂಗ್‍ನಲ್ಲಿ ಗಿರೀಶ್ ಪಾಟೀಲ್ 4 ಓವರ್‍ಗಳಲ್ಲಿ 53 ರನ್ ನೀಡಿ 2 ವಿಕೆಟ್, ಅಭಿಷೇಕ್ ಎಸ್.ಕೆ. 4 ಓವರ್‍ಗಳಲ್ಲಿ 37 ರನ್ ನೀಡಿ 2 ವಿಕೆಟ್ ಹಾಗೂ ಶ್ರೇಯಸ್ 4 ಓವರ್‍ಗಳಲ್ಲಿ 46 ರನ್ ನೀಡಿ 2 ವಿಕೆಟ್ ಪಡೆದರು. ಇವರ ಬೌಲಿಂಗ್ ಪ್ರಯತ್ನದಿಂದ ಜಿಸಿಸಿ ತಂಡವು ಕೊನೆಯವರೆಗೂ ಪಂದ್ಯದಲ್ಲಿ ಹಿಡಿತ ಕಾಯ್ದುಕೊಂಡಿತು.
ಫೈನಲ್ ಪಂದ್ಯವು ಕೊನೆಯ ಓವರ್‍ವರೆಗೂ ತೀವ್ರ ಪೈಪೆÇೀಟಿಯಿಂದ ಕೂಡಿದ್ದು, ಅಂತಿಮವಾಗಿ ಜಿಸಿಸಿ ಕ್ಲಬ್ 2 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿ ಟೂರ್ನಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಕಲಬುರಗಿ ಸ್ಪೋಟ್ರ್ಸ್ ಹಬ್ಬ ಕ್ರಿಕೆಟ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಆಯೋಜಕರು, ಸಂಘಟಕರು ಹಾಗೂ ಎಲ್ಲಾ ಸಹಕಾರ ನೀಡಿದವರಿಗೆ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್‍ನ ಎಲ್ಲ ಸದಸ್ಯರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿ ಟೂರ್ನಿಯನ್ನು ಅಚ್ಚುಕಟ್ಟಾಗಿ ನಡೆಸಿದ ಎಲ್ಲರಿಗೂ ಜಿಸಿಸಿ ಕ್ಲಬ್ ಕೃತಜ್ಞತೆ ವ್ಯಕ್ತಪಡಿಸಿದೆ.





















