Home ಜಿಲ್ಲೆ ಬೆಂಗಳೂರು ಗಾಂಧೀಜಿ – ಶಾಸ್ತ್ರಿ ಜಯಂತಿ ಆಚರಣೆ

ಗಾಂಧೀಜಿ – ಶಾಸ್ತ್ರಿ ಜಯಂತಿ ಆಚರಣೆ

ವಿಜಯಪುರ, ಅ. 4:ಗಾಂಧೀಜಿ ಯವರ ಕನಸಿನ ರಾಮರಾಜ್ಯ ಎಂದರೆ ಸಮಾನತೆ ಮತ್ತು ಸ್ವಾತಂತ್ರ್ಯ ಇರುವ ಸಮಾಜ ಎಂದು ಪ್ರಾಂಶುಪಾಲ ಬಿ. ಪಿ. ಬೈರೇಗೌಡ ಹೇಳಿದರು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಗಾಂಧಿ ಜಯಂತಿ ಹಾಗೂ ವಿಶ್ವ ಅಹಿಂಸಾ ದಿನಾಚರಣೆಯಲ್ಲಿ ಅವರು ಭಾಗವಹಿಸಿ, ಮಹಾತ್ಮ ಗಾಂಧೀಯವರ ಜೀವಮಾನವೇ ಒಂದು ಸಂದೇಶವಾಗಿದ್ದು, ಇಂದಿಗೂ ಸಹ ಇವರ ಹೆಸರು ಭಾರತೀಯರ ಮನಸ್ಸಿನಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದು ಹೇಳಿದರು.


ಕನ್ನಡ ಉಪನ್ಯಾಸಕ ಚಂದ್ರಶೇಖರ್ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಜನಚಿರಪರಿಚಿತರಾದರು ಮತ್ತು ದಕ್ಷಿಣ ಆಫ್ರಿಕಾದ ವಿವಿಧ ಸ್ಥಳಗಳಲ್ಲಿ ಗಾಂಧೀಜಿಯವರ ಪುತ್ರ್ತಳಿಗಳನ್ನು ನಿರ್ಮಿಸಲಾಗಿದೆ ಎಂದರು.


ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ರಾಮ ಭಜನೆ, ಸ್ವಚ್ಛತಾ ಪ್ರತಿಜ್ಞಾ ವಿಧಿ ಹಾಗೂ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿತ್ತು.


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ವೃಂದ, ಸ್ವಯಂಸೇವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.


ಖಾದಿ ಟೋಪಿ ಹಾಗೂ ನನ್ನ ಸತ್ಯಾನ್ವೇಷಣೆ ಕೃತಿಗಳ ವಿತರಣೆ
ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ, ವಿಪ್ರ ಕೋಟೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯು ಖಾದಿ ಟೋಪಿ ಮತ್ತು ಮಹಾತ್ಮ ಗಾಂಧೀಜಿ ರವರ ಆತ್ಮಕಥೆ “ನನ್ನ ಸತ್ಯಾನ್ವೇಷಣೆ” ಕೃತಿಗಳನ್ನು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ಖಾದಿ ಭಂಡಾರದ ಆವರಣದಲ್ಲಿ ಉಚಿತವಾಗಿ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ. ವಿ. ಪ್ರಶಾಂತ, ರಹಮತ್ ನಗರದ ಸರ್ವೋದಯ ಯುವ ಕೋಶದ ಸ್ವಯಂಸೇವಕರಾದ ಎಲ್. ಪವನ್, ಕೆ. ಶ್ಯಾಮ್ ಕುಮಾರ್, ಎಂ. ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯಪುರ ಪಟ್ಟಣದ ಗಾಂಧಿ ಚೌಕದಲ್ಲಿನ ವಿನಾಯಕ ಭಕ್ತ ಮಂಡಳಿ ಆಯೋಜಿಸಿದ ೯೧ನೇ ವಿನಾಯಕೋತ್ಸವ ೧೯ ದಿನಗಳ ಕಾಲ ನಡೆಯಿತು. ಶುಕ್ರವಾರ, ವಿನಾಯಕ ಸ್ವಾಮಿಗಳನ್ನು ಸಮೀಪದ ಗೋಕರೆ ಕೆರೆಯಲ್ಲಿ ವೇಳೆ ಇಂದು ವೈಭವಾಗ್ರಪೂರಿತ ವಿಸರ್ಜನೆಯು ನೆರವೇರಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.