
ಕೋಲಾರ,ಅ.೪: ದೇಶದಲ್ಲಿ ಮತಗಳ ಪರಿಷ್ಕರಣೆ ಹೆಸರಿನಲ್ಲಿ ಜಾರಿಗೆ ತರಲಾಗಿರುವ ಎಸ್.ಐ.ಆರ್. ಅವೈಜ್ಞಾನಿಕ ಕ್ರಮಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂಬ ಕಾರಣದಿಂದ ಅ. ೫ ರಂದು ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮ್ಯಾಕಲ್ ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಹಿಂದೆ ಈ ವಿಷಯವನ್ನು ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಎಸ್.ಐ.ಆರ್. ನೆಪದಲ್ಲಿ ಬಿಜೆಪಿ ಪಕ್ಷವು ಸಾಮಾನ್ಯ ಜನರ ಮತಗಳನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ ಎಂಬ ಭವಿಷ್ಯ ನುಡಿದಿದ್ದರು ಮತ್ತು ಈಗ ಬಿಜೆಪಿ ಆಲ್ಪಸಂಖ್ಯಾತ ಹಿಂದುಳಿದ ದಲಿತರ ಮತಗಳನ್ನು ಮತಪಟ್ಟಿಯಿಂದ ಕಸಿಯುವ ತಂತ್ರವನ್ನು ರೂಪಿಸಿದೆ ಎಂಬ ಆರೋಪವನ್ನು ಮಾಡಿದರು.
ರಾಹುಲ್ ಗಾಂಧಿ ಚುನಾವಣಾ ಆಯುಕ್ತರನ್ನು ಎಸ್.ಐ.ಆರ್. ಆಯುಕ್ತರನ್ನಾಗಿ ಅಥವಾ ಸುಪ್ರೀಂ ಕೋರ್ಟ್ ಜಡ್ಜ್ ಅವರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲು ಒತ್ತಾಯಿಸಿದ್ದರೂ, ಪ್ರಧಾನಿಗಳು ಮತ್ತು ಕೇಂದ್ರ ಸಚಿವ ಅಮಿತ್ ಷಾ ತಮ್ಮ ಆಪ್ತ ಜ್ಞಾನೇಶ್ ಕುಮಾರ್ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಿದ್ದಾರೆ.
ಬಿಹಾರ ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ೬೫ ಲಕ್ಷ ಮತದಾರರನ್ನು ಅನರ್ಹಗೊಳಿಸಿದ್ದರೆ, ಎಸ್.ಐ.ಆರ್. ೯೫ ಲಕ್ಷ ಮತದಾರರನ್ನು ಹಿಂದಕ್ಕೆ ತೆಗೆದು, ಸಾಮಾಜಿಕ ಸಮತೋಲನವನ್ನು ಕಾಪಾಡಿದೆ ಎಂಬ ಕಾರಣವನ್ನು ಸಹ ನೀಡಿದರು. ಇದರಿಂದಾಗಿ ಜ್ಞಾನೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತ ಸ್ಥಾನದಿಂದ ತೆಗೆದುಹಾಕಬೇಕು ಎಂಬುದು ಮೇಲುಬಾಗಿದ್ದು, ಅವರ ನೇಮಕಾತಿಗೆ ಪ್ರತಿನಿಧವನ್ನು ಸೋಮವಾರ ಬಂಗಾರಪೇಟೆ ಸರ್ಕಲ್‌ನಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಆಹಾರ ನಿಮಗದ ಉಪಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ಕುಡಾ ಅಧ್ಯಕ್ಷ ಮಹ್ಮದ್ ಹನಿಫ್, ನಗರಸಭೆ ಮಾಜಿ ಉಪಾಧ್ಯಕ್ಷ ಸಂಗೀತಾ ಜಗದೀಶ್, ಜಿಲ್ಲಾ ಎಸ್.ಸಿ. ಘಟಕದ ಅಧ್ಯಕ್ಷ ಜಯದೇವ್, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಪ್ಸರ್, ಗ್ರಾಮೀಣಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ವೆಂಕಟಪತಪ್ಪ, ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ನಗರಸಭೆ ಮಾಜಿ ಸದಸ್ಯ ಶಫಿಯುಲ್ಲಾ, ಪ್ಯಾರಜಾನ್, ತಾ.ಪಂ. ಮಾಜಿ ಸದಸ್ಯ ಗೋವಿಂದರಾಜು, ಕೆ.ಡಿ.ಪಿ. ಸದಸ್ಯ ರಾಜ್ ಕುಮಾರ್, ಕೋಟೆ ನವೀನ್, ರಾಜೇಶ್, ಅರೀಪ್ ಉಪಸ್ಥಿತರಿದ್ದರು.





















