
ಬಸವನ ಬಾಗೇವಾಡಿ: ಪ್ರಜಾ ಸೇವೆಂದೋಲನ ಸಭೆಗಳನ್ನು ಪರಿಣಾಮಕಾರಿಯ ಅನುಷ್ಠಾನಗೊಳಿಸಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಮೂಲಕ ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಸರ್ಕಾರದ ಪ್ರತಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಸೌಲಭ್ಯಗಳಿಗಾಗಿ ಜನರು ಕಚೇರಿಗಳಿಗೆ ಅಲೆದಾಡಬಾರದು ಸಾರ್ವಜನಿಕರ ಕುಂದು ಕೊರತೆಗಳಿಗೆ ಅಧಿಕಾರಿಗಳುಸ್ಪಂದಿಸಬೇಕು ಶಾಸಕರಾದ ಶ್ರೀ ಗಿಶಿವಾನಂದ್ ಪಾಟೀಲ್ ಮಾತನಾಡಿದರು ತಾಲೂಕ ಆಡಳಿತ ತಾಲೂರಕ ಪಂಚಾಯಿತಿ ಪುರಸಭೆಯ ಸಯೋಗದಲ್ಲಿ ಶನಿವಾರ ಬಸವ ಭವನದಲ್ಲಿ ಏರ್ಪಡಿಸಿದ ಬಸವನಬಾಗವಾಡಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಉದ್ಘಾ ಟಿಸಿ ಇದು ಮುಖ್ಯಮಂತ್ರಿಗಳ ಕನಸು ಸಮಾಜದಲ್ಲಿ ಪ್ರತಿ ಪ್ರಜೆ ಸಮಾನವಾಗಿ ಬದುಕು ಕಟ್ಟಿಕೊಳ್ಳಲು ಅಲ್ಲದೆ ಗ್ರಾಮೀಣ ಭಾಗದಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ ಶಿಕ್ಷಣ ಇರಲಿಲ್ಲ ಅದು ಸ್ವಾತಂತ್ರ‍್ಯ ನಂತರ ಜಾರಿಗೆ ಬಂದಿತು ಒಂದೊAದು ಸರಕಾರದ ಒಂದೊAದು ಕನಸು ಇರುತ್ತದೆ ಇದು ನಮ್ಮ ಸರ್ಕಾರದ ಕನಸು ಕಾರಣ ಅಧಿಕಾರಿಗಳಿಗೆ ದೊಡ್ಡ ಜವಾಬ್ದಾರಿ ಸರಕಾರ ಕೊಟ್ಟಿದೆ ಅದನ್ನು ನಿಭಾಯಿಸಬೇಕು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಮಸ್ಯೆ ಇರುವ ತಾಲೂಕು ಎಂದರೆ ಅದು ಬಸವನ ಬಾಗೇವಾಡಿ ಅಧಿಕಾರಿಗಳ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕೆಲವೊಂದು ಸಮಸ್ಯೆಗಳು ಸಮಸ್ಯೆಗಳಾಗಿ ಉಳಿಯುತ್ತವೆ ಅವುಗಳಿಗೆ ಯಾರೂ ಅರ್ಜಿ ಸಲ್ಲಿಸುವುದಿಲ್ಲ ಅಂತವುಗಳನ್ನು ಹುಡುಕಿ ಅಧಿಕಾರಿಗಳು ಬಗೆಹರಿಸಬೇಕು ಯಾವುದೇ ಹಬ್ಬ ಹರಿದಿನಗಳ ಬರಲಿ ಸಾಮರಸ್ಯದಿಂದ ಹಬ್ಬವನ್ನು ಆಚರಿಸಬೇಕು ಮತ್ತೊಂದು ಸಮಾಜಕ್ಕೆ ಅದು ಕಿರಿಕಿರಿ ಆಗಬಾರದು ಯುದ್ಧಗಳು ನಡೆದರೆ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಕಾರಣ ಜನರ ಕೆಲಸ ದೇವರೇ ಕೆಲಸ ಎಂದು ತಿಳಿದು ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಬೇಕು ನಾನು ಯಾವಾಗ ಶಾಸಕನಾದೆ ಅಂದಿನಿAದಲೇ ಈ ಪ್ರಜಾ ಸೇವೆ ಕೆಲಸವನ್ನು ಪ್ರತಿನಿತ್ಯ ನಾನು ವಿಜಯಪುರ ತೋಟದ ಮನೆಯಲ್ಲಿ ಜನರ ಸಮಸ್ಯೆಗಳ ಸ್ಪಂದಿಸಿ ಅವುಗಳನ್ನು ಬಗೆಹರಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ ನಾವು ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕಾಗಿ ಒಂದಿಷ್ಟು ಸಲ್ಲಿಸಬೇಕು ಅಜಿಸ್ ಪ್ರೇಮ್ ಜಿ ರತನ್ ಟಾಟಾ ಬಿರ್ಲಾ ಅವರ ಸಂಪತ್ತಿನಲ್ಲಿ ಶೇಕಡ ೮೦ರಷ್ಟು ಸಮಾಜಕ್ಕಾಗಿ ಸಲ್ಲಿಸುತ್ತಾರೆ ಅಂತೆ ಅವರ ಹೆಸರುಗಳು ಜನರ ಮನಸ್ಸಿನಲ್ಲಿವೆ ಆದರೆ ಅದೇ ಅಂಬಾನಿ ಅದಾನಿ ಅವರ ಹೆಸರುಗಳು ಜನರ ಮನಸ್ಸಿನಲ್ಲಿಲ್ಲ ಸರಕಾರದ ಯೋಜನೆಗಳು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಮುಟ್ಟಬೇಕು ಸರ್ಕಾರದಲ್ಲಿ ಅನುದಾನದ ಕೊರತೆ ಇರುವುದು ನಿಜ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಆದರೆ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಬರುವ ಜನವರಿಯಲ್ಲಿ ಜಲಧಾರೆ ಯೋಜನೆಯಡಿ ಇಡೀ ವಿಜಯಪುರ ಜಿಲ್ಲೆಗೆ ಆಲಮಟ್ಟಿ ಅಣೆಕಟ್ಟಿನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದೆಂದರು ಈ ವರ್ಷ ಭೀಕರ ಬರಗಾಲ ಎದುರಾಗಿದೆ ಭಗವಂತ ಈ ಬರಗಾಲದಲ್ಲಿ ಎದುರಿಸುವ ಶಕ್ತಿ ರೈತರಿಗೆ ತುಂಬಲಿ ಎಂದು ಮಾತನಾಡಿದರು ಕಾರ್ಯಕ್ರಮದಲ್ಲಿ ದಂಡಾಧಿಕಾರಿಗಳಾದ ಶ್ರೀ ವೈಎಸ್ ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ . ಪ್ರಜಾ ಸೇವಾ ಇಲಾಖೆಯನ್ನು ಸರಕಾರಿ ರಚನೆ ಮಾಡಿದೆ ಇದರ ಉದ್ದೇಶ . ಸಾರ್ವಜನಿಕರ ಕುಂದು ಕೊರತೆಗಳು ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವುದು ಪ್ರತಿ ಶನಿವಾರ ಪ್ರಜಾ ಸೇವಾ ಆಂದೋಲನವನ್ನು ನಡೆಸುವುದು ಅಲ್ಲದೆ ನಾವು ತಾಲೂಕಿನಲ್ಲಿ ಪ್ರತಿ ಇಲಾಖೆಯ ಕೌಂಟರ್ ಗಳನ್ನು ಮಾಡಿದೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಆನ್ಲೈನ್ ನಲ್ಲಿ ಎಂಟ್ರಿ ಮಾಡಿ ಅರ್ಜಿಗೊಂದು ನಂಬರ್ ಕೊಡುತ್ತದೆ ಇಂಥ ಸಮಸ್ಯೆಗಳನ್ನು ಇಲಾಖೆವಾರು ಬಗೆಹರಿಸುತ್ತದೆ ಎಂದರು ಪ್ರಜಾ ಸೇವಾ ಆಂದೋಲನ ಸಭೆಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತವೆ ಎಂದರು ತಾಲೂಕ ಪಂಚಾಯಿತಿ ಅಧಿಕಾರಿ ಶ್ರೀ ವೆಂಕಟೇಶ ಒಂದಾಲ ಮಾತನಾಡಿ ಸಾರ್ವಜನಿಕರು ಕಚೇರಿಯಿಂದ ಕಚೇರಿ ಅಲೆಯಬಾರದೇ ಎಂಬ ಉದ್ದೇಶದಿಂದ ಈ ಪ್ರಜಾ ಸೇವಾ ಇಲಾಖೆಯನ್ನು ಪ್ರಾರಂಭ ಮಾಡಿದೆ ಸರಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ಮುಟ್ಟಬೇಕು ಅಲ್ಲದೆ ಸರಕಾರ ತಾಂಡಾ ಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದೆ ೨೦ ೩೦ ವರ್ಷಗಳಿಂದ ಅವರು ವಾಸಿಸುವ ಮನೆಗಳಿಗೆ ಹಕ್ಕು ಪತ್ರಗಳು ಇರಲಿಲ್ಲ ಆದರೆ ಈಗಿನ ಸರಕಾರ ಅವುಗಳನ್ನು ಒದಗಿಸಿದೆ ಎಂದರು ತಾಲೂಕ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಮೆಹಬೂಬ ನಾಯ್ಕೋಡಿ ಮಾತನಾಡಿ ನುಡಿದಂತೆ ನಡೆದ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಕಾರ ಸಂಪೂರ್ಣವಾಗಿ ಜಾರಿಗೆ ತಂದಿದೆ ಆ ಯೋಜನೆಗಳು ಜನಸಾಮಾನ್ಯರಿಗೆ ಮುಟ್ಟುತ್ತವೆ ಅಲ್ಲದೆ ನಮ್ಮ ಶಾಸಕರು ಪ್ರತಿನಿತ್ಯ ತಮ್ಮ ತೋಟದ ಮನೆಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ನಮ್ಮ ತಾಲೂಕಿನಲ್ಲಿ ಸಮಸ್ಯೆಗಳು ಕಡಿಮೆ ಎಂದರು ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಕೇವಲ ೧೦ ರಿಂದ ೨೦ ಸಮಸ್ಯೆಗಳ ಮಾತ್ರ ಅರ್ಜಿ ಸಲ್ಲಿಸಲಾಗಿತ್ತು ಇವರಿಂದ ಸಾರ್ವಜನಿಕರಿಗೆ ಸಂಪೂರ್ಣವಾಗಿ ಮಾಹಿತಿ ದೊರಕಿಲ್ಲ ಪ್ರಚಾರದ ಕೊರತೆ ಎದ್ದು ಕಾಣುತ್ತಿತ್ತು ಸಭೆಯಲ್ಲಿ ಮಾತ್ರ ಅಂಗನವಾಡಿಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರೆಂದು ಸಮಸ್ಯೆದಾರರ ಸಭೆಯಲ್ಲಿ ಇರಲಿಲ್ಲ ಎಂದು ಜನರಲ್ಲಿ ಚರ್ಚೆ ನಡೆಯುತ್ತಿತ್ತು ಸಭೆಯ ಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಶ್ರೀ ಎಸ್ ಎಚ್ ಚಿತ್ತರಗಿ ಡಿವೈಎಸ್ಪಿ ಚಂದ್ರಕಾA ತ ನಂದ ರೆಡ್ಡಿ ಸಮಾಜ ಕಲ್ಯಾಣ ಅಧಿಕಾರಿ ಮಂಜುಳಾ ಹಿರೇ ಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇಣುಕಾ ಕಲ್ಬುರ್ಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶ್ರೀಮತಿ ಶಿಲ್ಪಾ ಹಿರೇಮಠ ಡಾಕ್ಟರ ಪ್ರಕಾಶ್ ಉಪ ವಿಭಾಗ ಅಧಿಕಾರಿ ಝಪಿ ಶಾ ನ. ಹಕ್ಕ್ ಮುಂತಾದವರ ಇದ್ದರು
























