
ಗುವಾಹಟಿ, ಸೆ.30- ಶುಭ್ ಮನ್ ಗಿಲ್ ಅವರ ಅಜೇಯ 223 ರನ್ ಗಳ ಭರ್ಜರಿ ದ್ವಿಶತಕದ ಹಾಗೂ ರೋಹಿತ್ ಶರ್ಮಾ ಅವರ ಬಿರುಸಿನ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ 8 ವಿಕೆಟ್ ಗಳ ಭರ್ಜರಿ ಜಯಗಳಿಸುವ ಮೂಲಕ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿತು.
ಏಕದಿನ ಕ್ರಿಕೆಟ್ ಕ್ರಿಕೆಟ್ ನಲ್ಲಿ 117 ಎಸೆತಗಳಲ್ಲಿ ವೇಗದ ದ್ವಿಶತಕ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್ ನ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಗಿಲ್ ಭಾಜನರಾದರು.
ಹಾಗೆ ನೋಡಿದರೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ಇಂಡೀಸ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಬೃಹತ್ ಮೊತ್ತ ಬಾರಿಸಿತು. ಈ ಬೃಹತ್ ಮೊತ್ತ ಚೇಸ್ ಮಾಡುವುದು ಕಬ್ಬಿಣದ ಕಡಲೆ ಎನಿಸಿತ್ತು ಆದರೆ ಆರಂಭಿಕ ಜೋಡಿ ನಾಯಕ ಗಿಲ್ ಹಾಗೂ ರೋಹಿತ್ ಶರ್ಮಾ ಅಮೋಘ ಬ್ಯಾಟಗ್ ಪ್ರದರ್ಶನ ನೀಡುವ ಮೂಲಕ ಸಾಧಿಸಿ ತೋರಿಸಿ ಬಿಟ್ಟಿತು.
ಆರಂಭದಿಳದಲೇ ರನ್ ವೇಗಕ್ಕೆ ಒತ್ತು ನೀಡಿದ ಈ ಭಲೇ ಜೋಡಿ ಕೆರೆಬಿಯನ್ನರ ಬೌಲಿಂಗ್ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿತು. ಈ ಜೋಡಿ ಮೊದಲ ವಿಕೆಟ್ ಗೆ 158 ಎಸೆತಗಳಲ್ಲಿ 255 ರನ್ ಪೇರಿಸಿತು. ಶರ್ಮಾ 101 ರನ್ ಗಳಿಸಿ ಔಟಾದರು.
ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ತಂಡದ ಗೆಲುವಿನ ರೂವಾರಿ ಎನಿಸಿದ್ದ ವಿರಾಟ್ ಕೊಹ್ಲಿ 29 ರನ್ ಗಳಿಸಿ ಔಟಾದರು.
ನಾಯಕ ಗಿಲ್ ತಮ್ಮ ವೃತ್ತಿ ಜೀವನದಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ.133 ಎಸೆತಗಳಲ್ಲಿ 26 ಬೌಂಡರಿ, 8 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 133 ಎಸೆತಗಳಲ್ಲಿ
223 ರನ್ ಗಳಿಸಿ ಅಜೇಯರಾಗುಳಿದರು. ಗಾಯಕ್ವಾಡ್ ಮತ್ತು ಗಿಲ್ ಜೋಡಿ 43.4 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 406 ರನ್ ಗಳಿಸಿ ಸರಣಿ ಕೈವಶ ಮಾಡಿಕೊಂಡಿತು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ , ಭಾರತದ ವಿರುದ್ಧ ದಾಖಲೆಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್ ಮತ್ತು ಅಮಿರ್ ಜಂಗೂ ಮೂವರೂ ಶತಕ ಸಿಡಿಸಿದರು, ಪ್ರವಾಸಿ ತಂಡವು ಭಾರತೀಯ ಬೌಲಿಂಗ್ ದಾಳಿಯನ್ನು ಪದೇ ಪದೇ ಭೇದಿಸಿತು. ಈ ಮೂರು ಶತಕಗಳು ಏಕದಿನ ಇತಿಹಾಸದಲ್ಲಿ ಮೂರು ವೈಯಕ್ತಿಕ ಶತಕಗಳನ್ನು ಒಳಗೊಂಡ ಆರನೇ ಇನ್ನಿಂಗ್ಸ್ ಆಯಿತು.
ಈ ಮೊತ್ತವು 2019 ರಲ್ಲಿ ಇಂಗ್ಲೆಂಡ್ ವಿರುದ್ಧ ಸೇಂಟ್ ಜಾರ್ಜ್‌ನಲ್ಲಿ ಗಳಿಸಿದ್ದ 389 ರನ್‌ಗಳ ವೆಸ್ಟ್ ಇಂಡೀಸ್‌ನ ಹಿಂದಿನ ಏಕದಿನ ದಾಖಲೆಯನ್ನು ಮೀರಿಸಿತು. ಅಲ್ಲದೆ, ವೆಸ್ಟ್ ಇಂಡೀಸ್ ಏಕದಿನ ಪಂದ್ಯದಲ್ಲಿ 400 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು.
ಜಾನ್ ಕ್ಯಾಂಪ್ ಬೆಲ್ 68 ಎಸೆತಗಳಲ್ಲಿ 101 ರನ್ ಬಾರಿಸಿದರು. ಶೈ ಹೋಪ್ 104,ಅಮೀರ್ ಜಾಂಗೋ 114 ರನ್ ಗಳಿಸುವ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. ರೋಸ್ಟನ್ ಚೇಸ್ 29 ರನ್ ಗಳಿಸಿ ಅಜೇಯರಾಗುಳಿದರು.
ಒಟ್ಟಾರೆ ಈ ಪಂದ್ಯದಲ್ಲಿ ಒಂದು ದ್ವಿಶತಕ, ನಾಲ್ಕು ಶತಕಗಳು ಬಂದವು. ಅಷ್ಟೇ ಅಲ್ಲ ರನ್ ಹೊಳೆಯೇ ಹರಿದಿಸದ್ದು ವಿಶೇಷ. ಒಟ್ಟಾರೆ ಪ್ರೇಕ್ಷರಿಗೆ ರಸದೌತಣ ನೀಡಿತು. ಅದರಲ್ಲೂ ಗಿಲ್ ಬ್ಯಾಟಿಂಗ್ ವೈಖರಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
























