ಕಲಬುರಗಿ: ಇಂದಿನಿಂದ ಅ. 21 ರವರೆಗೆ ಶಿಕ್ಷಣ ಇಲಾಖೆ ಘೋಷಿಸಿದ ದಸರಾ ರಜೆಯನ್ನು ಉಲ್ಲಂಘಿಸಿ ಶಾಲೆಗಳನ್ನು ತೆರೆದಿರುವ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ಶ್ರೀರಾಮ ಸೇನಾ ಜಿಲ್ಲಾಘಟಕದಿಂದ ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ,ಶಿವಕುಮಾರ ಸಗರ್,ಮಹೇಶ ಕೆಂಭಾವಿ,ರಾಜು ವಾಘಮೋರೆ ,ಉದಯ ಸುಲ್ತಾನಪುರ,ವೀರೇಶ ಬಿಂಗೆ,ಸಂಗಮೇಶ ಕಾಳಗನೂರ,ಪ್ರಶಾಂತ ಸಿರೂರ್ ಸೇರಿದಂತೆ ಹಲವರು ಪಾಲ್ಗೊಂಡರು.