Home ಜಿಲ್ಲೆ ಬೆಂಗಳೂರು ಬಿಜೆಪಿ ನಾಯಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ

ಬಿಜೆಪಿ ನಾಯಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ

ಬೆಂಗಳೂರು, ಅ. ೫- ದೇಶದಲ್ಲಿ ಮತಗಳ್ಳತನದ ವೋಟ್ ಚೋರಿ ಪ್ರಕರಣದ ಪ್ರಮುಖ ರೂವಾರಿಗಳು ಎಂದರೆ ಅದು ಬಿಜೆಪಿಯ ನಾಯಕರು ಹಾಗೂ ಬಿಜೆಪಿಯ ಬಿಎಲ್‌ಎ-೨ ಇವರೇ ನೈಜ ಮತದಾರರ ಹಕ್ಕನ್ನು ಕಸಿಯುತ್ತಿರುವ ಮತಗಳ್ಳರು, ಇವರನ್ನು ಕೂಡಲೇ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ವಿನೂತನ ಪ್ರತಿಭಟನೆ ನಡೆಸಿದರು.


ಭಾರತೀಯ ಜನತಾ ಪಕ್ಷದ ನಾಯಕರು ನೈಜ ಮತದಾರರನ್ನ ತೆಗೆದು ಹಾಕಲು ಶಿಫಾರಸ್ಸು ಪತ್ರ ಕೊಟ್ಟು ಫಾರಂ ೭ನ್ನು ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದ್ದರೆ ಅದನ್ನ ತೆಗೆಯಲು ಒತ್ತಡ ಹೇರುತ್ತಿರುವ ಬಿಜೆಪಿಯ ಮತ ಗಳ್ಳರ ವಿರುದ್ಧ ಪ್ರತಿಭಟಿಸಿದರು.


ದೇಶದ ಇತಿಹಾಸದಲ್ಲಿ ಮತಗಳ್ಳರನ್ನು ಹಿಡಿಯಬೇಕು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಕೆಪಿಸಿ ಅಧ್ಯಕ್ಷರು ಹಾಗೂ ಮಂತ್ರಿಗಳೆಲ್ಲರು ಸೇರಿ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಬಳಿ ಮನವಿ ಸಲ್ಲಿಸಿದರೆ ಮನವಿ ಸಲ್ಲಿಸಿದ್ದನ್ನು ಪ್ರತಿಭಟನೆ ನಡೆಸಲಾಗಿದೆ ಎಂದು ದೂರು ನೀಡುವ ಮೂಲಕ ಅತ್ಯಂತ ಕೀಳು ಮಟ್ಟದ ಹಾಗೂ ರಾಜಕೀಯ ಮೌಲ್ಯದ ಬಗ್ಗೆ ಅರಿವಿಲ್ಲದ ಬಿಜೆಪಿಯ ವಿರೋಧ ಪಕ್ಷದ ನಾಯಕರು ಹಾಗೂ ಪಕ್ಷದ ಮುಖಂಡರುಗಳು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದು ಅತ್ಯಂತ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ದುಷ್ಟ ರೀತಿಯ ವರ್ತನೆಯಾಗಿದೆ ಎಂದು ಆರೋಪಿಸಿದರು.


ಬಿಜೆಪಿ ನಾಯಕರು ರಾಜ್ಯದ ಹಾಗೂ ರಾಷ್ಟ್ರದ ಎಲ್ಲೆಡೆ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ರನ್ನ ಸಮರ್ಥಿಸಿಕೊಂಡು ಬೆಂಬಲಿಸುತ್ತಿದ್ದಾರೆ ಈ ಮೂಲಕ ಜ್ಞಾನೇಶ್ ಕುಮಾರ್ ಮತದಾರರ ಹಕ್ಕನ್ನ ಕಸಿಯುವ ಮುಖ್ಯ ಚುನಾವಣಾ ಆಯುಕ್ತ ಎಂದು ಈಗಾಗಲೇ ದೇಶದ ಎಲ್ಲೆಡೆ ಹೋರಾಟ ನಡೆಸಿ ಆತನ ರಾಜೀನಾಮೆಗೆ ಆಗ್ರಹ ಪಡಿಸುತ್ತಿದ್ದಾರೆ.


ದೇಶದ ಯುವ ಪೀಳಿಗೆ ಇದನ್ನು ಅರಿತು ಮೌನಕ್ಕೆ ಶರಣಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಜ್ಞಾನೇಶ್ ಕುಮಾರ್ ರಕ್ಷಣೆಗೆ ತಂತ್ರ ನಡೆಸುತ್ತಿದ್ದಾರೆ, ಈ ಕೂಡಲೇ ಜ್ಞಾನೇಶ್ ಕುಮಾರ್ ನನ್ನ ವಜಾಗೊಳಿಸಬೇಕು ಹಾಗೂ ರಾಜ್ಯದಲ್ಲಿ ನೈಜ ಮತದಾರರ ಹಕ್ಕನ್ನು ಕಸಿಯಲು ಯತ್ನಿಸುತ್ತಿರುವ ಬಿಜೆಪಿಯ ಮತಚೋರಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಎಂದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್,ಮಲ್ಲೇಶ್ ಟಿ.ಪ್ರಕಾಶ್, ರಂಜೀತ್ ಕುಮಾರ್, ಪುಟ್ಟರಾಜು, ಮಾಧವಹನೂರು, ಗೋಪಾಲ್ ಸಾಯಿನವೀನ್,ಮಂಜುನಾಥ್ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.