ಕಲಬುರಗಿ : ಕ್ರೀಡಾಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ, ಅಫಜಲಪೂರ ತಾಲೂಕಿನ ದೇವಲ ಗಾಣಗಾಪುರದ ಯತಿರಾಜ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜು ನಾರಾಯಣ ವಾಘ್ಮೋರೆಗೆ ರಾಜ್ಯಮಟ್ಟದ ಶಿಕ್ಷಕ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ), ಕರ್ನಾಟಕ, ಜನತಾಪ್ರಭಾ ದಿನಪತ್ರಿಕೆ ಹಾಗೂ ಚೇತನ ಫೌಂಡೇಶನ್ ಧಾರವಾಡ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇತ್ತೀಚಿಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಪ್ರದಾನ ಮಾಡಲಾಯಿತು. ಉತ್ತರ ಕರ್ನಾಟಕ ಭಾಗದ ಸಾಧಕರಾದ ರಾಜು ನಾರಾಯಣ ವಾಘ್ಮೋರೆ ಅವರ ಕ್ರೀಡಾಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರÀ ಸಾಧನೆಗೆ ಯತಿರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಭೀಮರಾವ್ ಜ ಚೌಡಾಪೂರಕರ್, ಸಂಸ್ಥೆಯ ಅಧ್ಯಕ್ಷ ಋಷಿಕೇಶ ಚೌಡಾಪೂರಕರ್, ಉಪಾಧ್ಯಕ್ಷ ನಾಗೇಶ್ ವಾ.ಪೂಜಾರಿ, ಕಾರ್ಯದರ್ಶಿ ಪ್ರಖ್ಯಾತ ದ.ಪೂಜಾರಿ, ಸಂಸ್ಥೆಯ ನಿರ್ದೇಶಕ ಗೋವಿಂದ ರಾವ್ ಚೌಡಾಪುರಕರ್ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಯತಿರಾಜ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಬಸವರಾಜ ಎಮ್ ಹಡಪದ, ಮೈಬೂಬ ಕಣ್ಣಿ, ರೇವಣಸಿದ್ದಪ್ಪ ಕಡಣಿ, ಅಮೃತ್ ನಿರಗುಡಿ, ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಶ್ರೀ ಗಂಗಾಪರಮೇಶ್ವರಿ ಶಾಲೆಯ ಸಿಬ್ಬಂದಿ, ಶ್ರೀ ಕ್ಷೇತ್ರ ಗಾಣಗಾಪುರದ ಎಲ್ಲಾ ಅನುದಾನಿತ ಶಾಲೆಯ ಸಿಬ್ಬಂದಿ ಹಾಗೂ ಸರ್ಕಾರಿ ಶಾಲೆಯ ಸಿಬ್ಬಂದಿ ವರ್ಗ ಮತ್ತು ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕ ವಿಕಾಸ ಜಿ. ಪಂಚಾಳ ರವರು ಪತ್ರಿಕೆಗೆ ವರದಿ ಮಾಡಿದ್ದಾರೆ.





















