
ಧಾರವಾಡ,ನ೨೪ : ನಿತ್ಯದ ಇಷ್ಟಲಿಂಗಾರ್ಚನೆಯೂ ಸೇರಿದಂತೆ ಮನೆ, ಮಠ, ಮಂದಿರಗಳಲ್ಲಿ ನಡೆಸುವ ಪೂಜಾ ಕೈಂಕರ್ಯಗಳು ಶೃದ್ಧಾ ಭಕ್ತಿಯಿಂದ ಕೂಡಿರಬೇಕು. ಮುಕ್ತ ಭಕ್ತಿಯ ಸೇವೆ ಶಿವನಿಗರ್ಪಿತವಾಗಿ ಪೂಜೆಯ ಫಲಗಳು ಮನುಕುಲದ ಬದುಕಿಗೆ ಪ್ರಾಪ್ತವಾಗುತ್ತವೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ರಾಚೀನ ಶ್ರೀಕಲ್ಮೇಶ್ವರ ದೇವಾಲಯದಲ್ಲಿ ನೂತನ ನಾಗಶಿಲ್ಪದ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವನ ನೀಡಿದರು. ದೇವಾಲಯಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವರ ವಿಗ್ರಹಗಳಿಗೆ ನಿರಂತರ ನಡೆಸುವ ಪೂಜಾ ಕೈಂಕರ್ಯಗಳಿAದ ಅಲ್ಲಿ ನಿರ್ಮಾಣವಾಗುವ ಭಾವುಕ ಪರಿಸರದಲ್ಲಿ ಜನಮನದ ಭಾವನೆಗಳು ತಿಳಿಗೊಳ್ಳುತ್ತವೆ ಎಂದರು.ಕೆಂಪು ಶಿಲೆಯ ಲಿಂಗ : ಅಮ್ಮಿನಬಾವಿಯ ಈ ಪ್ರಾಚೀನ ಕಲ್ಮೇಶ್ವರ ದೇವಾಲಯದ ಗರ್ಭಗೃಹದಲ್ಲಿರುವ ಶಿವಲಿಂಗವು ಕೆಂಪು ಶಿಲೆಯಿಂದ ಕೂಡಿದ್ದು ವ್ಯಾಪಕ ಶಕ್ತಿಸಂಚಯವನ್ನು ಹೊಂದಿದೆ. ಕೆಂಪು ಶಿಲೆಯ ಶಿವಲಿಂಗಕ್ಕೆ ಸಲ್ಲಿಸುವ ಭಕ್ತಿಯ ಪ್ರಾರ್ಥನೆಯ ಸಂಕಲ್ಪಗಳು ಬೇಗನೇ ಫಲನೀಡುತ್ತವೆ ಎಂದೂ ಅಭಿನವ ಶಾಂತಲಿAಗ ಶಿವಾಚಾರ್ಯರು ನುಡಿದರು.
೩.೭ ಅಡಿ ಎತ್ತರದ ನೂತನ ನಾಗಶಿಲ್ಪದ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ಗಣಪತಿ ಪೂಜೆ, ಸ್ವಸ್ತಿಪುಣ್ಯಾಹವಾಚನ, ನವಗ್ರಹ ಶಾಂತಿ ಪೂಜೆ, ರುದ್ರಾಭಿಷೇಕ, ಸರ್ಪಸಂಸ್ಕಾರ ಹೋಮದ ವಿಶೇಷ ಪೂಜಾಕೈಂಕರ್ಯಗಳು ವೈದಿಕರಾದ ಸೋಮಲಿಂಗಶಾಸ್ತಿç ಗುಡ್ಡದಮಠ ಅವರಿಂದ ಜರುಗಿದವು.
ಶ್ರೀಕಲ್ಮೇಶ್ವರ ದೇವಸ್ಥಾನದ ಭಕ್ತರುಗಳಾದ ಬಿ.ಸಿ.ಕೊಳ್ಳಿ, ಶಂಕರ ಹುಲ್ಲೂರ, ಬಸಣ್ಣ ಯಡಳ್ಳಿ, ಈರಣ್ಣ ಕಡ್ಲೆಪ್ಪನವರ, ಚಂಬಣ್ಣ ಉಂಡೋಡಿ, ಬಸಪ್ಪ ಪೂಜಾರ, ಶಿವಪ್ಪ ಪೂಜಾರ, ಚೆನ್ನಮಲ್ಲಪ್ಪ ಪೂಜಾರ, ಚಿದಾನಂದ ಗದಗಿನ, ಗಂಗಪ್ಪ ಪೂಜಾರ, ಚೆನ್ನಪ್ಪ ಮೂಲಿಮನಿ, ಬಸಯ್ಯ ಮಠಪತಿ, ರುದ್ರಯ್ಯ ಮಠಪತಿ, ಮಂಜುನಾಥ ಸವದತ್ತಿ, ನಿಂಗಪ್ಪ ಮಾದಿಗ್ಗೊಂಡ, ಶಿವಕುಮಾರ ಹುಲ್ಲೂರ, ಪದ್ಮಾವತಿ ಹುಲ್ಲೂರ, ಸಾವಕ್ಕ ಪೂಜಾರ, ಸುಜಾತಾ ಹುಲ್ಲೂರ, ಮಹಾದೇವಿ ಪೂಜಾರ ಇದ್ದರು.





















