Home ಜಿಲ್ಲೆ ಕಲಬುರಗಿ ಸ್ನೇಹದ ಪ್ರತೀಕ ಸಾಹುಕಾರ ಗುರುಶರಣ ಜಿಡಗಾ

ಸ್ನೇಹದ ಪ್ರತೀಕ ಸಾಹುಕಾರ ಗುರುಶರಣ ಜಿಡಗಾ

ಆಳಂದ: ಸ್ನೇಹದ ಮೌಲ್ಯ ಸಾರಿದ ಸಾಹುಕಾರ್ ಗುರುಶರಣ ಲಾವಣಿ ಜಿಡಗಾ ಸ್ನೇಹಿತರು, ಬಂಧು-ಬಳಗ ಮತ್ತು ಸಾರ್ವಜನಿಕರ ಹೃದಯ ಗೆದ್ದ ಸಮಾಜಸೇವಕ ನಿಜವಾದ ಸ್ನೇಹವೆಂದರೆ ಕಷ್ಟ-ಸುಖಗಳಲ್ಲಿ ಜೊತೆಯಾಗುವುದು ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿರುವ ಸಾಹುಕಾರ್ ಗುರುಶರಣ ಲಾವಣಿ ಜಿಡಗಾ ಅವರು ಸ್ನೇಹ ದಿನದಂದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸ್ನೇಹಿತರು, ಬಂಧುಗಳು, ಆಪ್ತರು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿರುವ ಅವರು ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ, ಅಗತ್ಯವಿರುವವರಿಗೆ ವಿವಿಧ ರೀತಿಯ ನೆರವು ನೀಡುವ ಮೂಲಕ ಅನೇಕ ಕುಟುಂಬಗಳ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ.
ಇದರೊಂದಿಗೆ, ಸಂಗೀತ ಕ್ಷೇತ್ರದ ಅಭಿವೃದ್ಧಿಗೂ ಅವರು ವಿಶೇಷ ಕೊಡುಗೆ ನೀಡಿದ್ದು, ಹಲವಾರು ಪ್ರತಿಭಾವಂತ ಸಂಗೀತ ವಿದ್ವಾಂಸರ ಪಾಂಡಿತ್ಯವನ್ನು ಗೌರವಿಸಿ ಅವರಿಗೆ ಧನಸಹಾಯ ಮಾಡಿರುವುದರ ಜೊತೆಗೆ, ಸಂಗೀತ ಕಲೆಯ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ತಬಲಾ, ಹಾರ್ಮೋನಿಯಂ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ವಿತರಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ. ಅವರ ಈ ಕಲಾಪೋಷಕ ಮನೋಭಾವವನ್ನು ಸಂಗೀತ ವಲಯವು ಮೆಚ್ಚುಗೆ ವ್ಯಕ್ತಪಡಿಸಿದೆ.
ಅನೇಕ ಸ್ನೇಹಿತರು ಹಾಗೂ ಪರಿಚಯಸ್ಥರಿಗೆ ದೇಶ-ವಿದೇಶ ಪ್ರವಾಸದ ಅವಕಾಶ ಕಲ್ಪಿಸುವುದು, ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಅವರ ಸೇವೆಯ ಮತ್ತೊಂದು ವಿಶೇಷತೆಯಾಗಿದೆ ಎಂದು ಸ್ನೇಹಿತರು ಅಭಿಪ್ರಾಯಪಟ್ಟಿದ್ದಾರೆ.
ಸರಳತೆ, ಸಹೃದಯತೆ ಮತ್ತು ಸೇವಾ ಮನೋಭಾವದಿಂದ ಎಲ್ಲರೊಂದಿಗೆ ಬೆರೆತು ಬದುಕುತ್ತಿರುವ ಗುರುಶರಣ ಲಾವಣಿ ಜಿಡಗಾ ಅವರು ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಸ್ನೇಹ ಎಂಬ ಅಮೂಲ್ಯ ಸಂಬAಧವನ್ನು ಕೇವಲ ಮಾತಿನಲ್ಲಿ ಅಲ್ಲ, ತಮ್ಮ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಉಳಿಸಿಕೊಂಡಿರುವ ಅವರಿಗೆ ಸ್ನೇಹ ದಿನದ ಅಂಗವಾಗಿ ಅನೇಕ ಸ್ನೇಹಿತರು, ಗಣ್ಯರು ಹಾಗೂ ಸಾರ್ವಜನಿಕರು ಶುಭಾಶಯಗಳನ್ನು ಸಲ್ಲಿಸಿ, ಅವರ ಸಮಾಜಮುಖಿ ಹಾಗೂ ಕಲಾಪೋಷಕ ಸೇವೆ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದ್ದಾರೆ.