
ಕಲಬುರಗಿ,ನ.21-ವ್ಯಕ್ತಿಯೊಬ್ಬರ ಮೊಬೈಲ್‍ಗೆ ಸೈಬರ್ ವಂಚಕ ಆರ್‍ಟಿಓ ಇ-ಚಾನೆಲ್ ಲಿಂಕ್ ಕಳುಹಿಸಿ ಅವರ ಮೊಬೈಲ್ ಹ್ಯಾಕ್ ಮಾಡಿ 6.30 ಲಕ್ಷ ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಅಜೀತ್‍ಕುಮಾರ ಹೀರೊಬಿ ಎಂಬುವವರು ಈ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಜೀತ್‍ಕುಮಾರ್ ಅವರಿಗೆ ಅಪರಿಚಿತ ಮೊಬೈಲ್‍ನಿಂದ ವಂಚಕ ಆರ್‍ಟಿಓ ಇ-ಚಾನೆಲ್ ಲಿಂಕ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡಿ ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6.30 ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.




















